ಸುಳ್ಯ: ಮೋಹನ್ ಜ್ಯುವೆಲ್ಲರಿ ಮಾಟ್೯ ನಲ್ಲಿ ಕಳವು ಪ್ರಕರಣ, ಆರೋಪಿಗಳ ಅಪರಾಧ ಸಾಬೀತು

0

3 ವರ್ಷ ಜೈಲು ಹಾಗೂ 10 ಸಾವಿರ ದಂಡ ವಿಧಿಸಿದ ನ್ಯಾಯಾಲಯ

 ಸುಳ್ಯದ ಹಳೆ ಬಸ್ಟಾಂಡ್ ಬಳಿಯಲ್ಲಿರುವ ಮೋಹನ್ ಜ್ಯುವೆಲ್ಲರಿ ಮಾಟ್೯ ನಿಂದ ಮಾರ್ಚ್ 31.2021 ರಂದು ರಾತ್ರಿ ಚಿನ್ನ ಆಭರಣ ಮತ್ತು ನಗದು ಕಳ್ಳತನದ ಪ್ರಕರಣ ಕ್ಕೆ ಸಭಂಧಿಸಿ ಆರೋಪಿಗಳ ಅಪರಾಧ ಸಾಬೀತು ಗೊಂಡ ಹಿನ್ನಲೆಯಲ್ಲಿ ಜ 8 ರಂದು ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ಆಪಾದಿತರು ತಂಗಚ್ಚ,ಬಶೀರ್ ಮಹಮ್ಮದ್,ಮ್ಯಾತ್ಯೂ ರವರಾಗಿದ್ದು  01.04.2021 ರ ಬೆಳಿಗ್ಗೆ 06.25 ರ ಮಧ್ಯೆ ಅಂಗಡಿಯ ಶೆಟರ್ಸನ್ನು  ಕಬ್ಬಿಣದ ಹಾರೆಗೋಲು ಮತ್ತು ಕಬ್ಬಿಣದ ಪಿಕಾಸಿನಿಂದ  ಮುರಿದು ಒಳಪ್ರವೇಶಿಸಿ ಅಂಗಡಿಯ ಒಳಗಿದ್ದ 48 ಚಿನ್ನದ ಉಂಗುರಗಳು, 72 ಜೊತೆ ಚಿನ್ನದ ಬೆಂಡೋಲೆ  ಹಾಗೂ ಇನ್ನೊಂದು ಕಪಾಟಿನಲ್ಲಿದ್ದ 36 ಚಿನ್ನದ ಉಂಗುರ , 9 ಜೊತೆ ಬೆಂಡೋಲೆ , 8 ಚಿನ್ನದ ಸರ, 2 ಚಿನ್ನದ ಬ್ರಾಸ್ ಲೈಟ್ , ಹಾಗೂ ಕ್ಯಾಶ್ ಡ್ರಾವರಿನಲ್ಲಿ ನವೀಕರಿಸಲು ಬಂದ 4ಚಿನ್ನದ ಬಳೆ, 1 ಜೊತೆ ಬೆಂಡೋಲೆ , 1 ನೆಕ್ ಲೇಸ್ ಹಾಗೂ ಕೆಂಪು ಡಬ್ಬಿಯಲ್ಲಿ 2 ಚಿನ್ನದ ನಾಣ್ಯ ಲಕ್ಷ್ಮಿ ಮೀಸ್ರಿಗಳು ಹಾಗೂ ಸಣ್ಣ ಪುಟ್ಟ ಆಭರಣಗಳು 75 ಗ್ರಾಂ , ಒಟ್ಟು ಚಿನ್ನಾಭರಣ 180ಗ್ರಾಂ ಅದರ ಅಂದಾಜು ಮೌಲ್ಯ 7,50,000 ರೂ ಹಾಗೂ ಕ್ಯಾಶ್ ಡ್ರಾವರಿನಲ್ಲಿದ್ದ ಅಂದಾಜು 50,000 ನಗದನ್ನು  ಕಳವು ಮಾಡಿದ್ದರು.

ಈ ಪ್ರಕರಣದ ಒಂದನೇ ಆರೋಪಿ ತಲೆಮರೆಸಿಕೊಂಡಿದ್ದರಿಂದ  ಪ್ರಕರಣವನ್ನು ವಿಭಜಿಸಲಾಗಿ ನಂತರ 1ನೇ ಆರೋಪಿ ಸಿಕ್ಕನಂತರ ಎರಡೂ ಪ್ರಕರಣಗಳು ಒಟ್ಟಾಗಿ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್ .ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಬಿ.ಮೋಹನ್ ಬಾಬು ರವರ ಮುಂದೆ ವಿಚಾರಣೆ ನಡೆದು ಆರೋಪಿತರ ಅಪರಾಧ ಸಾಬೀತಾಗಿ ದೋಷಿ ಎಂದು 2024 ಜ.7 ರಂದು ಘೋಷಿಸಿ ತೀರ್ಪು ಪ್ರಕಟಿಸಿರುತ್ತಾರೆ.

ಶಿಕ್ಷೆಯ ಪ್ರಮಾಣವನ್ನು 08.01.2025 ರಂದು ಎರಡೂ ಅಪರಾಧಿಗಳಿಗೆ ಕಲಂ 457 ರಡಿಯಲ್ಲಿ 3 ವರ್ಷಗಳ ಕಾಲ ಶಿಕ್ಷೆ ಮತ್ತು ರೂ.10,000 ದಂಡ , ದಂಡ ತೆರಲು ತಪ್ಪಿದ್ದಲ್ಲಿ ಆರೋಪಿ ಹೆಚ್ಚುವರಿಯಾಗಿ ೬ ತಿಂಗಳ ಸಾದಾ ಕಾರಾಗೃಹ ಶಿಕ್ಷೆ , ಕಲಂ 380 ರಡಿಯಲ್ಲಿ 3 ವರ್ಷಗಳ ಕಾಲ ಸಾದಾ ಕಾರಾಗೃಹ ಶಿಕ್ಷೆ ಮತ್ತು ರೂ.10,000 ದಂಡ , ದಂಡ ಪಾವತಿಸಲು ತಪ್ಪಿದ್ದಲ್ಲಿ 6 ತಿಂಗಳ ಕಾರಾಗೃಹ ಶಿಕ್ಷೆ , ಮೇಲಿನ ಎರಡು ಅಪರಾಧಗಳಿಗೆ ವಿಧಿಸಲಾದ ಶಿಕ್ಷೆಯನ್ನು ಏಕ ಕಾಲಕ್ಕೆ ಜಾರಿಗೊಳಸತ್ತಕ್ಕದ್ದು  ಎಂದು ಆದೇಶಿಸಲಾಗಿದೆ.

ಸರ್ಕಾರದ ಪರವಾಗಿ ಪ್ರಕರಣವನ್ನು ಸಹಾಯಕ ಸರಕಾರಿ ಅಭಿಯೋಜಕರು ನಡೆಸಿ ವಾದ ಮಂಡಿಸುತ್ತಾರೆ.