ಇತಿಹಾಸ ಪ್ರಸಿದ್ಧ ಅಜ್ಞಾವರ ಮೇನಾಲ ಮಖಾಂ ಉರೂಸ್ ಹಾಗೂ ಐದು ದಿನಗಳ ಧಾರ್ಮಿಕ ಪ್ರಭಾಷಣ ಜನವರಿ 17 ರಿಂದ 21ರ ತನಕ ನಡೆಯಲಿದೆ ಎಂದು ಅಜ್ಜಾವರ ಮೇನಾಲ ಎಂಜೆಎಂ ಖತೀಬರಾದ ಹಸೈನಾರ್ ಫೈಝಿ ಕೊಡಗು ತಿಳಿಸಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು
ಜಾತಿ-ಮತ ಭೇದವಿಲ್ಲದೆ ಸರ್ವ ಧರ್ಮೀಯರು ಗೌರವಿಸಲ್ಪಡುವ ಹಲವಾರು ರೋಗಗಳಿಗೆ ಪರಿಹಾರವನ್ನು ಬಯಸಿ ಬಂದ ಭಕ್ತಾದಿಗಳಿಗೆ ಪರಿಹಾರವನ್ನು ನೀಡುವ ಅಲ್ಲಾಹುವಿನ ಸಾಮಿಪ್ಯ ಪುಣ್ಯಸ್ಥಳವಾದ ಅಜ್ಞಾವರ – ಮೇನಾಲ ದರ್ಗಾ ಶರೀಫ್ ನಲ್ಲಿ ಪ್ರತೀ ವರ್ಷ ನಡೆಸಿಕೊಂಡು ಬರುವ ಉರೂಸ್ ಸಮಾರಂಭವನ್ನು ಐದು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.
ಉರೂಸ್ ಕಾರ್ಯಕ್ರಮವು ಜನವರಿ 17 ರಂದು ಪ್ರಾರಂಭಗೊಂಡು ಜನವರಿ 21 ರಂದು ಸಮಾರೋಪ ಗೊಳ್ಳಲಿದೆ.
ಉರೂಸ್ ಕಾರ್ಯಕ್ರಮದಲ್ಲಿ ಐದು ದಿನಗಳ ಧಾರ್ಮಿಕ ಮತಪ್ರವಚನ ಕಾರ್ಯಕ್ರಮವೂ ನಡೆಯಲಿದೆ.ಉರೂಸ್ ಸಮಾರಂಭದಲ್ಲಿ ಅನೇಕ ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆ ಉರೂಸ್ ಸಮಾರಂಭ ಪ್ರಯುಕ್ತ ಸಮಾರೋಪ ಸಮಾರಂಭದಂದು ಸರ್ವ ಧರ್ಮ ಸೌಹಾರ್ದ ಕಾರ್ಯಕ್ರಮ ನಡೆಯಲಿದೆ.
ಜನವರಿ 17 ರಂದು ಶುಕ್ರವಾರ ಅಜ್ಞಾವರ ಮುಹಿಯುದ್ದೀನ್ ಜುಮ್ಮಾ ಮಸೀದಿ ಅಂಗಣದಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಸಯ್ಯದ್ ಅಹ್ಮದ್ ಪೂಕೋಯ ತಂಗಳ್ ಪುತ್ತೂರು ದುಆ ನೇತೃತ್ವ ವಹಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ನಂತರ ಧಾರ್ಮಿಕ ಮತಪ್ರವಚನ ನಡೆಯಲಿದ್ದು, ಅಜ್ಜಾವರ ಜುಮ್ಮಾ ಮಸೀದಿ ಖತೀಬರಾದ ಹಸೈನಾರ್ ಪೈಝಿ ಕೊಡಗು ಉಪನ್ಯಾಸ ನೀಡಲಿದ್ದಾರೆ.
ಜನವರಿ 18 ರಂದು ಶನಿವಾರ ಅಜ್ಞಾವರ ಮುಹಿಯುದ್ದೀನ್ ಜುಮಾ ಮಸೀದಿ ಅಂಗಣದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಭಾಷಣಗಾರ ಅಬ್ದುಲ್ ಅಝೀಝ್ ಅಶ್ರಫಿ ಪಾಣತ್ತೂರ್ ಉಪನ್ಯಾಸ ನೀಡಲಿದ್ದಾರೆ.
ಜನವರಿ 19 ರಂದು ಮೇನಾಲ ದರ್ಗಾ ಶರೀಫ್ ನಲ್ಲಿ ಮಗ್ರಿಬ್ ನಮಾಜು ಬಳಿಕ ಮಖಾಂ ಅಲಂಕಾರ ಮತ್ತು ಡಿಕ್ರ್ ಹಲ್ಕ ನಡೆಯಲಿದೆ ಕಾರ್ಯಕ್ರಮದ ನೇತೃತ್ವವನ್ನು ಹಕೀಂ ತಂಜಳ್ ಅದೂರು ನೆರವೇರಿಸಲಿದ್ದಾರೆ.
ಖಲೀಲ್ ಹುದವಿ ಅಲ್ ಮಾಲಿಕಿ ಕಾಸರಗೋಡ್ ಉಪನ್ಯಾಸ ನೀಡಲಿದ್ದಾರೆ.
ಜ. 20 ರಂದು ಮೇನಾಲ ದರ್ಗಾ ಶರೀಫ್ ವಠಾರದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಅಲ್ ಹಾಜ್ ಅಬ್ದುಲ್ ಮಜೀದ್ ಬಾಖವಿ ಉಪನ್ಯಾಸ ನೀಡಲಿದ್ದಾರೆ.
ಜ.21 ರಂದು ರಾತ್ರಿ 7:00ಕ್ಕೆ ಸೌಹಾರ್ದ ಸಂಗಮ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ
ಊರಿನ ಸರ್ವಧರ್ಮೀಯರು ಭಾಗವಹಿಸಲಿದ್ದಾರೆ. ಖತೀಬರಾದ ಹಸೈನಾರ್ ಫೈಝಿ ಕೊಡಗು ಅವರ ದುವಾದೊಂದಿಗೆ ಆರಂಭ ಗೊಳ್ಳುವ ಸೌಹಾರ್ದ ಸಮಾರಂಭದ ಅಧ್ಯಕ್ಷತೆಯನ್ನು ದರ್ಗಾ ಶರೀಫ್ ಮೊಕ್ತೆಸರರಾದ ಎಂ. ಗುಡ್ಡಪ್ಪ ರೈ ವಹಿಸಲಿದ್ದಾರೆ.
ಜಿಲ್ಲಾ ಧಾರ್ಮಿಕ ಪರಿಷತ್ತು ಸದಸ್ಯ ಲಕ್ಷ್ಮೀಶ ಗಬಲಡ್ಕ, ದ.ಕ ಜಿಲ್ಲಾ ಗೌಡ ವಿದ್ಯಾಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಪ್ರೊಫೆಸರ್ ಜವರೇಗೌಡ,
ಹಾಗೂ ಬಹು ಮೌಲಾನ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಹಾಗೂ ಸರ್ವ ಧರ್ಮೀಯರು ಭಾಗವಹಿಸಲಿದ್ದಾರೆ.
ನಂತರ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ ಎ ವಹಿಸಲಿದ್ದಾರೆ ಕಾರ್ಯಕ್ರಮದ ಉದ್ಘಾಟನೆಯನ್ನುದ.ಕ.ಜಿಲ್ಲಾ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮ ಇದರ ಅಧ್ಯಕ್ಷರಾದ ಬಹು ಶೈಖುನಾ ಅಲ್ಟಾಜ್ ಎನ್.ಪಿ.ಎಂ ಝನುಲ್ ಅಬಿದೀನ್ ತಂಜಳ್ ಕುನ್ನುಂಗೈ ಕೇರಳ ನೆರವೇರಿಸಲಿದ್ದಾರೆ ಅಂತಾರಾಷ್ಟ್ರೀಯ ಪ್ರಭಾಷಣಗಾರ ಬಹು: ಶಫೀಕ್ ಬದ್ರಿ ಅಲ್ ಬಾಖವಿ ಕಡೈಕಲ್ ಕೇರಳ ಉಪನ್ಯಾಸ ನೀಡಲಿದ್ದಾರೆ,
ಧಾರ್ಮಿಕ ಉಪನ್ಯಾಸವು ಪ್ರತೀದಿನ ರಾತ್ರಿ 8.00 ಕ್ಕೆ ಆರಂಭಗೊಳ್ಳುವುದು ಜನವರಿ 21 ರಂದು ಸಮಾರೋಪ ಸಮಾರಂಭ ರಾತ್ರಿ ಕೂಟು ಪ್ರಾರ್ಥನೆ, ಮೌಲಿದ್ ಪಾರಾಯಣ ಮತ್ತು ಅನ್ನದಾನ ವಿರುವುದು .ಹರಕೆ ಮತ್ತು ಇತರ ಸಾಮಗ್ರಿಗಳನ್ನು ನೇರವಾಗಿ ದರ್ಗಾಕ್ಕೆ ತಲುಪಿಸಬೇಕಾಗಿ ವಿನಂತಿ ಮಾಡಿಕೊಂಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜಮಾಯತ್ ಕಮಿಟಿ ಉಪಾಧ್ಯಕ್ಷ ಅಂದಹಾಜಿ,ಪ್ರಧಾನ ಕಾರ್ಯದರ್ಶಿ ಅಬೂಭಕ್ಕರ್ ಎ,ಕೋಶಾಧಿಕಾರಿ ಶರೀಫ್ ರಿಲಾಕ್ಷ್ ಕಾರ್ಯದರ್ಶಿ ಖಾದರ್ ಎನ್,ಜಮಾಯತ್ ಸದಸ್ಯ ಅಬ್ದುಲ್ಲಾ ಎ. ಉಪಸ್ಥಿತರಿದ್ದರು