ಪಂಜ ಸೀಮೆಯ ದೇಗುಲದ ಜಾತ್ರೋತ್ಸವಕ್ಕೆ:ಧ್ವಜಾರೋಹಣ⬆️ ನಾಳೆ (ಫೆ.2.) ಬಂಟಮಲೆ ಯಿಂದ ತೀರ್ಥ ತರುವ ಕಾರ್ಯಕ್ರಮ

0

ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಜಾತ್ರೋತ್ಸವವು ಜ.24 ರಿಂದ ಫೆ.9 ತನಕ ನಡೆಯಲಿದೆ.ಫೆ.1 ರಂದು ಸಂಜೆ ಕ್ಷೇತ್ರ ತಂತ್ರಿಗಳ ಆಗಮನ ಬಳಿಕ ವಿವಿಧ ವೈಧಿಕ ಕಾರ್ಯಕ್ರಮಗಳು ರಾತ್ರಿ ಧ್ವಜಾರೋಹಣ
ನಡೆಯಿತು.ಮುಂಜಾನೆ ಶ್ರೀ ಗಣಪತಿ ಹವನ ,ಶ್ರೀ ರುದ್ರ ಹವನ ಮತ್ತು ವೇದಪಾರಾಯಣ ,ಗರಡಿ ಬೈಲ್ ಮೂಲ ನಾಗನ ಕಟ್ಟೆಯಲ್ಲಿ ಆಶ್ಲೇಷ ಬಲಿ ಪೂಜೆ ಮತ್ತು ನಾಗ ತಂಬಿಲ ಸೇವೆ ,ಮಹಾ ಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.


ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಪೂರ್ವಾಧ್ಯಕ್ಷರಾದ ಡಾ.ರಾಮಯ್ಯ ಭಟ್, ಪದ್ಮನಾಭ ರೈ ಅಗೋಳಿಬೈಲು ಗುತ್ತು, ಗೌರವ ಸಲಹೆಗಾರ ಮಹೇಶ್ ಕುಮಾರ್ ಕರಿಕ್ಕಳ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಉತ್ಸವ ಸಮಿತಿಯಗಳ ಸಂಚಾಲಕರು , ಸೀಮೆಯ ಭಕ್ತಾದಿಗಳು ಉಪಸ್ಥಿತರಿದ್ದರು.

.

ಫೆ.2 ರಂದು ಪೂರ್ವಾಹ್ನ ಗಂಟೆ 7.00ಕ್ಕೆ ನಾಗತೀರ್ಥದ ಮೂಲಸ್ಥಾನ ಬಂಟಮಲೆಯಿಂದ ಶ್ರೀ ದೇವಾಲಯಕ್ಕೆ ತೀರ್ಥ ತರುವುದು, ಮಹಾಪೂಜೆ, ನಿತ್ಯ ಬಲಿ ನಡೆಯಲಿದೆ.