ಕನಕಮಜಲು ಯುವಕ ಮಂಡಲದ ವತಿಯಿಂದ ರಂಗಭೂಮಿ ಕಲಾವಿದ ಮಂಡ್ಯ ರಮೇಶ್ ಅವರೊಂದಿಗೆ ಮಾತು ಮತ್ತು ಸಂವಾದ

0

ಕನಕಮಜಲಿನ ಯುವಜನ ವಿಕಾಸ ಕೇಂದ್ರ ಯುವಕ ಮಂಡಲದ ವತಿಯಿಂದ ರಂಗಭೂಮಿ ಕಲಾವಿದ ಹಾಗೂ ಚಲನಚಿತ್ರ ನಟ ಮಂಡ್ಯ ರಮೇಶ್ ಅವರೊಂದಿಗೆ ಮಾತು ಮತ್ತು ಸಂವಾದ ಹಳ್ಳಿಯ ಉಸಿರಲ್ಲಿ ಕಲೆ ಕಾರ್ಯಕ್ರಮವು ಫೆ.1ರಂದು ಸಂಜೆ ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ರೈತಭವನದಲ್ಲಿ ಜರುಗಿತು.

ಚಾರ್ಟಡ್ ಅಕೌಂಟೆಂಟ್ ಸಿ.ಎ. ಗಣೇಶ್ ಭಟ್ ಅವರು ಮಂಡ್ಯ ರಮೇಶ್ ಅವರಿಗೆ ಹೂಗುಚ್ಚ ನೀಡುವುದರ ಮೂಲಕ ಸ್ವಾಗತಿಸಿ ದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಳಿಕ ಹಳ್ಳಿಯ ಉಸಿರಲ್ಲಿ ಕಲೆ ಎಂಬ ವಿಷಯದ ಕುರಿತಾಗಿ ಕಲಾವಿದ ಮಂಡ್ಯ ರಮೇಶ್ ಜೊತೆಗೆ ಯುವಕ ಮಂಡಲದ ಪದಾಧಿಕಾರಿಗಳು ಹಾಗೂ ಕನಕಮಜಲು ಗ್ರಾಮಸ್ಥರು ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷ ಹರ್ಷಿತ್ ಯು.ಕೆ., ಕಾರ್ಯದರ್ಶಿ ಅಶ್ವಥ್ ಅಡ್ಕಾರು ಸೇರಿದಂತೆ ಯುವಕ ಮಂಡಲದ ಸದಸ್ಯರುಗಳು ಹಾಗೂ ಕನಕಮಜಲು ಗ್ರಾಮಸ್ಥರು ಉಪಸ್ಥಿತರಿದ್ದರು.