ಎಲಿಮಲೆಯಲ್ಲಿ ಬಸ್ ಗೆ ಸ್ವಾಗತ ಕೋರಿದ ಗ್ರಾಮಸ್ಥರು: ಗಣ್ಯರು ಭಾಗಿ
ಪುತ್ತೂರಿನಿಂದ ಸಂಜೆ ಬೆಳ್ಳಾರೆ ಮಾರ್ಗವಾಗಿ ಸಂಚರಿಸಿ ಪೈಲಾರಿನಲ್ಲಿ ನಿಲುಗಡೆ ಗೊಳ್ಳುತಿದ್ದ ಸರಕಾರಿ ಬಸ್ ಮಾ 18 ರಿಂದ ಜಬಳೆ ಮಾರ್ಗವಾಗಿ ಎಲಿಮಲೆಗೆ ಬಂದು ತಂಗುತ್ತಿದೆ.
ಈ ಬಸ್ ನ ಸಂಚಾರವನ್ನು ಎಲಿಮಲೆವರೆಗೆ ವಿಸ್ತರಿಸಲು ಜಯರಾಮ ಶೆಟ್ಟಿ ಮರ್ಗಿಲಡ್ಕ, ಜಯಾನಂದ ಪಟ್ಟೆ, ಚೈತನ್ಯ ದೀಕ್ಷಿತ್ ಕೆಳಪಾರೆ, ಬಾಲಚಂದ್ರ ಮೋಂಟಡ್ಕ, ಮೋಹಿತ್ ಹರ್ಲಡ್ಕ ಸೇರಿದಂತೆ ಹಲವರು ಕಾಂಗ್ರೆಸ್ ಮುಖಂಡ, ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿದ್ದೋದೇಶ ಸಹಕಾರ ಸಂಘದ ಅಧ್ಯಕ್ಷರಾದ ಮಹಮ್ಮದ್ ಇಕ್ಬಾಲ್ ಎಲಿಮಲೆ ಯವರ ಮುಖಾಂತರ ಪ್ರಯತ್ನ ನಡೆಸಿದ್ದರು.

ಮಾ. 18 ರಂದು ರಾತ್ರಿ ಎಲಿಮಲೆಗೆ ಆಗಮಿಸಿದ ಬಸ್ಸನ್ನು ಎಲಿಮಲೆಯಲ್ಲಿ ಮುಖಂಡರಾದ ಮಹಮ್ಮದ್ ಇಕ್ಬಾಲ್ ಎಲಿಮಲೆ, ರಾಧಾಕೃಷ್ಣ ಬೊಳ್ಳೂರು, ಎ. ವಿ. ತೀರ್ಥರಾಮ, ವೇಣುಗೋಪಾಲ ಪುನ್ಕುಟ್ಟಿ, ವಿಷ್ಣು ಭಟ್ ಮೂಲೆತೋಟ, ಜಯಾನಂದ ಪಟ್ಟೆ, ಧನಂಜಯ ಕೋಟೆಮೂಲೆ, ಮೋಹಿತ್ ಹರ್ಲಡ್ಕ ಮೊದಲಾದವರು ಸ್ವಾಗತಿಸಿದರು. ರಾಧಾಕೃಷ್ಣ ಬೊಳ್ಳೂರು ರವರು ತೆಂಗಿನಕಾಯಿ ಒಡೆಯುವ ಮೂಲಕ ಬಸ್ ಸಂಚಾರಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕೃಷ್ಣಪ್ರಸಾದ್ ಪಾರೆ, ಮುರಳೀಧರ ಕೋಡ್ತುಗುಳಿ,ಗಣೇಶ್ ಭಟ್ ಹೊನ್ನಡಿ, ರಾಜಕುಮಾರ್ ಅಂಬೆಕಲ್ಲು, ಹೇಮನಾಥ ಕೋಡ್ತುಗುಳಿ, ಸತ್ಯನಾರಾಯಣ ಭಟ್ ಹೊನ್ನಡಿ, ವಿಷ್ಣು ಪ್ರಸಾದ್ ಹೊನ್ನಡಿ, ಚೈತನ್ಯ ದೀಕ್ಷಿತ್ ಕೆಳಪಾರೆ, ಜಯರಾಮ ಶೆಟ್ಟಿ ಮರ್ಗಿಲಡ್ಕ, ಬಾಲಚಂದ್ರ ಮೋಂಟಡ್ಕ ಹಾಗೂ ಪೈಲಾರು, ಗುಡ್ಡೆಮನೆ, ಕೋಡ್ತುಗುಳಿ, ಮರ್ಗಿಲಡ್ಕ, ಬಾಜಿನಡ್ಕ, ಹೊನ್ನಡಿ, ಜಬಳೆ ಮತ್ತು ಎಲಿಮಲೆ ಭಾಗದ ಊರಿನವರು ಉಪಸ್ಥಿತರಿದ್ದರು.