
ಮಾಣಿ -ಮೈಸೂರು ಹೆದ್ದಾರಿಯ ಬಿಳಿಯಾರು ಬಳಿ ಕೇರಳದ ಪ್ರತಿಷ್ಟಿತ ಪೂಕುಳತ್ತಿಲ್ ನರ್ಸರಿರವರ ಸುಳ್ಯ ಗಾರ್ಡನ್ ಮತ್ತು ರಬ್ಬರ್ ನರ್ಸರಿ ಶಾಖೆಯು ಮಾ 21 ರಂದು ಶುಭ ಆರಂಭಗೊಂಡಿತು.

ನೂತನ ಸಂಸ್ಥೆಯನ್ನು ಪೆರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಚಂದ್ರಕಲಾ ರವರು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಹಾಗೂ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ್ ರೈ ರವರು ದೀಪ ಬೆಳಗಿಸಿ ಸಂಸ್ಥೆಯನ್ನು ಉದ್ಘಾಟಿಸಿದರು.
ಕೇರಳ ಭಾಗದ ಫಾದರ್ ಸಾಜಿ ಮತ್ತು ಸುಳ್ಯ ಮದರ್ ತೆರೇಸಾ ಚರ್ಚಿನ ಫಾದರ್ ಮನೋಜ್ ವಿಕರ್ ರವರು ಪ್ರಾರ್ಥನೆ ನೆರವೇರಿಸಿ ಸಂಸ್ಥೆಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ವರ್ಗೀಸ್ ಸನ್ನಿ, ಮಾತ್ತ್ಯು, ಜೋಮೊನ್, ಶ್ರೀಮತಿ ಲಿಲ್ಲಿ, ಮ್ಯಾರಿ, ರೋಷನ್ ಹಾಗೂ ಸ್ಥಳೀಯರಾದ ಪ್ರದೀಪ್, ತಿರುಮಲೇಶ್ವರ, ಪೂವಪ್ಪ ಮಾಸ್ಟರ್ ಮೊದಲಾದವರು ಉಪಸ್ಥಿತರಿದ್ದರು.
ಈ ನರ್ಸರಿ ಯಲ್ಲಿ ವಿವಿಧ ಜಾತಿಯ ಹೂವಿನ ಗಿಡಗಳು, ಹಣ್ಣು ಹಂಪಲಿನ ಗಿಡಗಳು, ತರಕಾರಿ ಗಿಡಗಳು, ಹಾಗೂ ಹೈಬ್ರಿಡ್ ತೆಂಗಿನ ಗಿಡಗಳು ಮತ್ತು ರಬ್ಬರ್ ಗಿಡಗಳು ಲಭ್ಯವಿರುತ್ತದೆ ಎಂದು ಮಾಲಕರಾದ ಆಸಿಸ್ ಫ್ರಾನ್ಸಿಸ್ ರವರು ತಿಳಿಸಿದರು.