ಸಂಧ್ಯಾರಶ್ಮಿ ಸಾಹಿತ್ಯ ಸಂಘವು ಸುಳ್ಯ ತಾಲೂಕು ಕ.ಸಾ.ಪ.ದ ಸುಳ್ಯ ಹೋಬಳಿ ಘಟಕದ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ತಿಂಗಳ ಸಾಹಿತ್ಯ ಸಂವಾದ ಮಾಲಿಕೆಯಲ್ಲಿ ಸಾಹಿತಿ ಡಾ.ರಮಾನಂದ ಬನಾರಿಯವರ ವ್ಯಕ್ತಿತ್ವ ಮತ್ತು ಕೃತಿ ಪರಿಚಯ ಮಾ. 22 ರಂದು ಸಂಧ್ಯಾ ರಶ್ಮಿ ಸಭಾಂಗಣದಲ್ಲಿ ನಡೆಯಿತು.

ವೆಂಕಟ್ರಾಮ್ ಭಟ್ ಅವರು ಡಾ.ಬನಾರಿಯವರ ವ್ಯಕ್ತಿತ್ವದ ಮನೋಜ್ಞ ಚಿತ್ರಣವನ್ನು ನೀಡಿದರು. ವಿರಾಜ್ ಅಡೂರು, ಕುಮಾರಸ್ವಾಮಿ ತೆಕ್ಕುಂಜ, ಡಾ.ವೀಣಾ ಅವರ ವಿವಿಧ ಸಾಹಿತ್ಯ ಕೃತಿಗಳ ಹೂರಣ ವನ್ನು ಬಗೆದು ತೋರಿದರು.

ಡಾ. ಬನಾರಿಯವರು ಮಾತನಾಡಿ ತನ್ನ ವೈದ್ಯಕೀಯ ಮತ್ತು ಸಾಂಸ್ಕೃತಿಕ ಜ್ಞಾನವನ್ನು ಸಮಾಜಕ್ಕೆ ಕೃತಿಗಳ ಮೂಲಕ ತಲುಪಿಸಿರುವುದಾಗಿ ಹೇಳಿದರು. ಶ್ರೀಮತಿ ಲೀಲಾ ದಾಮೋದರ ಅವರು ಅಧ್ಯಕ್ಷತೆ ವಹಿಸಿದ್ದರು.
ಕೆ.ಆರ್. ಗೋಪಾಲಕೃಷ್ಣ ಸ್ವಾಗತಿಸಿ, ಬನಾರಿಯವರ ಗೀತೆಗಳನ್ನು ಹಾಡಿದರು.
ಶ್ರೀಮತಿ ಚಂದ್ರಾವತಿ ಬಡ್ಡಡ್ಕ ವಂದನಾರ್ಪಣೆ ಸಲ್ಲಿಸಿದರು. ಸಿಎ. ಗಣೇಶ್ ಭಟ್ ಪಿ. ಅವರು ಕಾರ್ಯಕ್ರಮದ ನಿರೂಪಣೆಯ ಜೊತೆಗೆ ಪ್ರಾಯೋಜಕತ್ವವನ್ನು ನಿರ್ವಹಿಸಿದರು.