Home Uncategorized ಉಬರಡ್ಕ : ಮಾವಿನಮಿಡಿ ಕೊಯ್ಯುತ್ತಿದ್ದಾಗ ಗೆಲ್ಲು ತುಂಡಾಗಿ ಬಿದ್ದು ಗಂಭೀರ ಗಾಯ : ಆಸ್ಪತ್ರೆಗೆ ದಾಖಲು

ಉಬರಡ್ಕ : ಮಾವಿನಮಿಡಿ ಕೊಯ್ಯುತ್ತಿದ್ದಾಗ ಗೆಲ್ಲು ತುಂಡಾಗಿ ಬಿದ್ದು ಗಂಭೀರ ಗಾಯ : ಆಸ್ಪತ್ರೆಗೆ ದಾಖಲು

0

ಜನಾರ್ದನ ಪೂಜಾರಿಯವರ ಚಿಕಿತ್ಸೆಗೆ ಬೇಕಾಗಿದೆ ನೆರವಿನ ಹಸ್ತ

ಉಬರಡ್ಕದಲ್ಲಿ ಮಾವಿನ ಮಿಡಿ ಕೊಯ್ಯುತ್ತಿದ್ದಾಗ ತಾನು ನಿಂತಿದ್ದ ಗೆಲ್ಲು ತುಂಡಾಗಿ ಬಿದ್ದ ಪರಿಣಾಮ ಮರದಲ್ಲಿದ್ದ ವ್ಯಕ್ತಿ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ.

ಉಬರಡ್ಕ ಮಿತ್ತೂರು ಗ್ರಾಮದ ಉಬರಡ್ಕ ಗ್ರಾ.ಪಂ. ಗ್ರಂಥಾಲಯ ಮೇಲ್ವಿಚಾರಕಿ ಶ್ರೀಮತಿ ಚಿತ್ರಾವತಿಯವರ ಪತಿ ಜನಾರ್ದನ ಪೂಜಾರಿಯವರ ಮಾ.22ರಂದು ಕೆಲಸಕ್ಕೆ ಹೋಗಿದ್ದರು. ಅಲ್ಲಿ ಮಾವಿನ ಮರವೇರಿ ಮಾವಿನಮಿಡಿ ಕೊಯ್ಯುತ್ತಿದ್ದಾಗ ತಾನು ನಿಂತಿದ್ದ ಗೆಲ್ಲು ತುಂಡಾಗಿ ಬಿದ್ದು ಇವರು ಕೂಡಾ ಕೆಳಕ್ಕೆ ಬಿದ್ದರು. ಪರಿಣಾಮ ಅವರ ಸೊಂಟಕ್ಕೆ ಹಾಗೂ ತಲೆಗೆ ಗಾಯವಾಗಿದೆ. ತಕ್ಷಣ ಅವರನ್ನು ಸುಳ್ಯ ಆಸ್ಪತ್ರೆಗೆ ಕರೆತಂದು ವೈದ್ಯರ ಸಲಹೆ ಮೇರೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಡ‌ ಕುಟುಂಬ : ಜನಾರ್ದನ ಪೂಜಾರಿಯವರದ್ದು ಬಡ ಕುಟುಂಬವಾಗಿದ್ದು ಉಬರಡ್ಕದ ನೆಯ್ಯೋಣಿಯಲ್ಲಿ ಪತ್ನಿ ಹಾಗೂ ಇಬ್ಬರು ಹೆಣ್ಣು‌ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದರು. ಊರಲ್ಲೇ ಕೃಷಿ ತೋಟದಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಇವರು ದುಡಿದರೇನೆ ಮನೆಯ ಬಂಡಿ ಓಡುವುದು.‌ಇದೀಗ ಜನಾರ್ದನ ರೇ ಗಾಯಗೊಂಡು ಆಸ್ಪತ್ರೆ ಸೇರಿದ್ದು, ಆಸ್ಪತ್ರೆಯಲ್ಲಿ ಹಣದ ಅವಶ್ಯಕತೆ ಬೀಳುವುದರಿಂದ ಸಹೃದಯರು ಇವರ ಚಿಕಿತ್ಸೆಗೆ ಸಹಾಯ ನೀಡುವಂತೆ ವಿನಂತಿಸಲಾಗಿದೆ. ಸಹಾಯ ಮಾಡುವವರು ಈ ಪೋಸ್ಟರ್ ನ ನಂಬರ್ ಗೆ ಸಹಾಯ ಮಾಡಬಹುದಾಗಿದೆ.

NO COMMENTS

error: Content is protected !!
Breaking