ಉದ್ಯಮಿ ವಿಜಯ ಕುಮಾರ್ ಸೊರಕೆಯವರು ವಿಕ ಸುಪರ್ ಸ್ಟಾರ್ ರೈತ – 2024 ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ವಿದೇಶಿ ಮೂಲದ ಸುಮಾರು 50 ಬಗೆಯ ಹಣ್ಣುಗಳನ್ನು ತಮ್ಮ ಕೃಷಿ ಕ್ಷೇತ್ರದಲ್ಲಿ ಬೆಳೆಸಿ ಹಣ್ಣು ಕೃಷಿಯಲ್ಲಿ ಜಿಲ್ಲೆಯಲ್ಲೇ ಮೈಲುಗಲ್ಲು
ಸ್ಥಾಪಿಸಿರುವುದಲ್ಲದೆ 60 ಎಕರೆ ಕೃಷಿ ಪ್ರದೇಶದಲ್ಲಿ ಅಡಕೆ, ತೆಂಗು, ಕಾಳುಮೆಣಸು, ಕೊಕ್ಕೊ, ರಬ್ಬರ್, ಬಾಳೆ, ರಾಮಪತ್ರೆ, ಹಣ್ಣಿನ ಗಿಡಗಳು
ಮತ್ತು ಅರಣ್ಯ ಕೃಷಿ ಮಾಡುತ್ತಿರುವ ಇವರ ಕೃಷಿ ಕ್ಷೇತ್ರದ ಸಾಧನೆಯನ್ನು ಗುರುತಿಸಿ ವಿಜಯ ಕರ್ನಾಟಕ 7ನೇ ಆವೃತ್ತಿಯ ವಿಕ ಸೂಪರ್‌ಸ್ಟಾರ್ ರೈತ
2024 ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.


