ದೀಕ್ಷಿತ್ ರೈ ಪಿ ಬ್ಯಾಚುಲರ್ ಆಫ್ ವಿಷುಯಲ್ ಆರ್ಟ್ಸ್ ನ 2024ನೇ ಸಾಲಿನ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ನೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಆಧೀನಕ್ಕೊಳಪಟ್ಟ ಮಹಾಲಸಾ ವಿಷುಯಲ್ ಆರ್ಟ್ಸ್ ಕಾಲೇಜು ಮಂಗಳೂರು ಇಲ್ಲಿ ಬ್ಯಾಚುಲರ್ ಆಫ್ ವಿಷುಯಲ್ ಆರ್ಟ್ಸ್ ಪದವಿಯನ್ನು ಪೂರೈಸಿ ಪ್ರಸ್ತುತ ಬೆಂಗಳೂರು ಯೂನಿವರ್ಸಿಟಿಯಲ್ಲಿ ಮಾಸ್ಟರ್ ಆಫ್ ವಿಷುಯಲ್ ಆರ್ಟ್ಸ್ ಸ್ನಾತಕೋತ್ತರ ಪದವಿ ಓದುತ್ತಿರುವ ಇವರು ಎಡಮಂಗಲ ಗ್ರಾಮದ ಪೊಯ್ಯತ್ತೂರು ವಿಶ್ವನಾಥ ರೈ ಮತ್ತು ಶೀಲಾವತಿ ವಿ. ರೈ ದಂಪತಿಯ ಪುತ್ರ.