ಸುಳ್ಯ ತಾಲೂಕು ಆರೋಗ್ಯಾಧಿಕಾರಿಯಾಗಿ ಡಾ.ತ್ರಿಮೂರ್ತಿ ವಿ.ಕೆ.ಯವರು ಅಧಿಕಾರ ವಹಿಸಿಕೊಂಡಿದ್ದಾರೆ.
ಆರೋಗ್ಯಾಧಿಕಾರಿಯಾಗಿದ್ದ ಡಾ.ನಂದಕುಮಾರ್ ರವರು ಮಾ.31ರಂದು ಸೇವಾ ನಿವೃತ್ತರಾಗಿದ್ದು, ಅವರಿಂದ ತೆರವಾದ ಸ್ಥಾನವನ್ನು ಡಾ.ತ್ರಿಮೂರ್ತಿ ಯವರಿಗೆ ಪ್ರಭಾರ ನೀಡಲಾಗಿದೆ.
ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿಯಾಗಿರುವ ಡಾ.ತ್ರಿಮೂರ್ತಿ ಯವರು 2000 ಇಸವಿಯಲ್ಲಿ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಡಳಿತ ವೈದ್ಯಾಧಿಕಾರಿಯಾಗಿ ಸೇವೆಗೆ ಸೇರಿದರು. ಬಳಿಕ 2015 ರಲ್ಲಿ ವರ್ಗಾವಣೆಗೊಂಡು ಸುಬ್ರಹ್ಮಣ್ಯಕ್ಕೆ ಬಂದರು.
ಕಡಬ ನಿವಾಸಿಯಾಗಿರುವ ಡಾ.ತ್ರಿಮೂರ್ತಿ ಯವರ, ಪತ್ನಿ ಡಾ.ಶಾಂಭವಿಯವರು ಕಡಬದಲ್ಲಿ ದಂತ ವೈದ್ಯರಾಗಿದ್ದಾರೆ.
ಪುತ್ರಿ ನಮನ ಇಂಜಿನಿಯರ್ ಪದವೀಧರೆ. ಇನ್ನೋರ್ವ ಪುತ್ರಿ ಖುಷಿ ಬೆಳ್ಳಾರೆ ಜ್ಞಾನಗಂಗಾ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ.