ಸುಳ್ಯ ನಗರ ಪಂಚಾಯತ್ ವತಿಯಿಂದ ಸುಳ್ಯ ಗಾಂಧಿನಗರದಲ್ಲಿ ಅಳವಡಿಸಿದ್ದ ಈ ಪ್ರದೇಶದಲ್ಲಿ ಬೀದಿಬದಿ ವ್ಯಾಪಾರ ಮಾಡುವುದನ್ನು ನಿ಼ಷೇಧಿಸಲಾಗಿದೆ.’ ಎಂಬ ಬ್ಯಾನರ್ ರನ್ನು ಯಾರೋ ಕಿಡಿಗೇಡಿಗಳು ತೆರವು ಗೊಳಿಸಿದ್ದಾರೆ ಎಂದು ತರಕಾರಿ ಅಂಗಡಿ ವ್ಯಾಪಾರಸ್ಥರು ದೂರಿಕೊಂಡಿದ್ದಾರೆ.
ಸುಳ್ಯ ಪೇಟೆಯ ತರಕಾರಿ ಅಂಗಡಿ ವ್ಯಾಪಾರಸ್ಥರು ತರಕಾರಿ ಬೀದಿ ಬದಿ ವ್ಯಾಪಾರವನ್ನು ನಿಲ್ಲಿಸಬೇಕು.ತೆರಿಗೆ ಕಟ್ಟಿ ವ್ಯಾಪಾರ ಮಾಡುವ ನಮಗೆ ತೊಂದರೆಯಾಗುತ್ತದೆ ಎಂದು ನಗರ ಪಂಚಾಯತ್ ಗೆ ದೂರು ಕೊಟ್ಟಿದ್ದರು. ಈ ಹಿನ್ನಲೆಯಲ್ಲಿ ನ.ಪಂ.ವತಿಯಿಂದ ಬ್ಯಾನರ್ ಅಳವಡಿಸಲಾಗಿತ್ತು. ಇದೀಗ ಅದು ಕಾಣೆಯಾಗಿದೆ.