172 ಮಂದಿಗೆ ಪ್ರಯೋಜನ
ಮಂಡೆಕೋಲು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಇದರ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇದರ ಸಹಕಾರದಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಕಾರ್ಯಾಗಾರ ಮಂಡೆಕೋಲು ಸೊಸೈಟಿ ಸಬಾಂಗಣದಲ್ಲಿ ಎ.7 ರಂದು ನಡೆಯಿತು.
ಆದಾರ್ ಸಮಸ್ಯೆಯಿಂದಾಗಿ ಹಲವಾರು ಮಂದಿ ಸಮಸ್ಯೆಗಳನ್ನೆದುರಿಸುತ್ತಿದ್ದು ಹೊಸತಾಗಿ ಆಧಾರ್ ಪಡಕೊಳ್ಳುವವರಿಗೆ ಹಾಗೂ ಆಧಾರ್ ನೋಂದಣಿಯಲ್ಲಾದ ಕೆಲವು ಸಮಸ್ಯೆಗಳುಂಟಾದವರಿಗೆ ಸೂಕ್ತ ಸಮಯದಲ್ಲಿ ಆಧಾರ್ ಪಡಕೊಳ್ಳಲು ಮಂಗಳೂರು ಪುತ್ತೂರು ಕಡೆಗಳಿಗೆ ಅಲೆದಾಡಬೇಕಾಗಿದ್ದು ಈ ಹಿನ್ನೆಲೆಯಲ್ಲಿ ಈ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಸುಮಾರು 131 ತಿದ್ದುಪಡಿ ಹಾಗೂ 41 ಹೊಸ ನೋಂದಣಿ ಸಹಿತ ಒಟ್ಟು 172 ಮಂದಿ ಇದರ ಸದುಪಯೋಗ ಪಡೆದುಕೊಂಡಿರುತ್ತಾರೆ.