Home Uncategorized ಕೂತ್ಕುಂಜದಲ್ಲಿ ಮಹಿಳಾ ದಿನಾಚರಣೆ

ಕೂತ್ಕುಂಜದಲ್ಲಿ ಮಹಿಳಾ ದಿನಾಚರಣೆ

0

ಶ್ರೀ ದುರ್ಗಾ ಮಹಿಳಾ ಮಂಡಲ ( ರಿ ) ಕೂತ್ಕುಂಜ, ಶ್ರೀ ದೇವಿ ಸಂಜೀವಿನಿ ಸಂಘ ಚಿದ್ಗಲ್, ಧರ್ಮಶ್ರೀ ನವೋದಯ ಸಂಘ ಚಿದ್ಗಲ್, ಧನುಶ್ರೀ ನವೋದಯ ಸಂಘ ಚಿದ್ಗಲ್ , ದುರ್ಗಾಶ್ರೀ ರೈತ ಸಂಘ ಚಿದ್ಗಲ್ ಇವುಗಳ ಜಂಟಿ ಆಶ್ರಯದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮವು ಚಿದ್ಗಲ್ ಚಂದ್ರಾ ಹೊನ್ನಪ್ಪ ಅವರ ನಿವಾಸದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ದೇವಕಿ ಧರ್ಮಪಾಲ ( ಅಧ್ಯಕ್ಷರು , ಮಹಿಳಾ ಮಂಡಲ ಕೂತ್ಕುಂಜ ) ವಹಿಸಿದ್ದರು. ಶ್ರೀಮತಿ ವಿಜಯಲಕ್ಷ್ಮಿ ( ಅಧ್ಯಕ್ಷರು, ಗ್ರಾಮ ಪಂಚಾಯತ್ ಪಂಜ ) ಉದ್ಘಾಟನೆ ನೆರವೇರಿಸಿದರು.


ಶ್ರೀಮತಿ ಲಲಿತ ಪರಮೇಶ್ವರ ಬಾಬ್ಲುಬೆಟ್ಟು ( ಅಧ್ಯಕ್ಷರು , ಅಮೃತಾ ಮಹಿಳಾ ಮಂಡಲ ಪಂಬೆತ್ತಾಡಿ ) ಮುಖ್ಯ ಅತಿಥಿ ಯಾಗಿ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಶ್ರೀಮತಿ ಚಂದ್ರಾ ಹೊನ್ನಪ್ಪ ಚಿದ್ಗಲ್ ( ಅಧ್ಯಕ್ಷರು , ಸಂಜೀವಿನಿ ಸಂಘ ಚಿದ್ಗಲ್ ಹಾಗೂ ಮಹಿಳಾ ಸಂಘಟನೆ ಹಾಗೂ ಧರ್ಮಶ್ರೀ ನವೋದಯ ಸಂಘ ಚಿದ್ಗಲ್ ), ಶ್ರೀಮತಿ ಹೇಮಾ ವಸಂತ್ ( ಅಧ್ಯಕ್ಷರು, ಧನುಶ್ರೀ ನವೋದಯ ಸಂಘ ಚಿದ್ಗಲ್ ) , ಶ್ರೀಮತಿ ಚಂದ್ರಾ ಭಾಸ್ಕರ ( ಅಧ್ಯಕ್ಷರು, ದುರ್ಗಾಶ್ರೀ ರೈತ ಸಂಘ ಚಿದ್ಗಲ್ ) , ಶ್ರೀಮತಿ ರೋಹಿಣಿ ರಮೇಶ್ ( ಕಾರ್ಯದರ್ಶಿ, ಮಹಿಳಾ ಮಂಡಲ ಕೂತ್ಕುಂಜ ) ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹುಲಿ ಕರು ಆಟ , ಚೀಟಿ ಎತ್ತಿ ಅಭಿನಯ, ಹಣೆಗೆ ಬಿಂದಿ ಇಡುವ ಸ್ಪರ್ಧೆ ಗಳನ್ನು ನಡೆಸಲಾಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು .

ಪೂರ್ವಾಧ್ಯಕ್ಷರಾದ ಲತಾ ದಿನೇಶ್ ಸ್ವಾಗತಿಸಿದರು. ಹೇಮಾ ವಸಂತ್ ಕಾರ್ಯಕ್ರಮ ನಿರೂಪಿಸಿದರು. ಪೂರ್ವ ಕಾರ್ಯದರ್ಶಿ ವೀಣಾ ಗಿರಿಧರ್ ವಂದಿಸಿದರು.

NO COMMENTS

error: Content is protected !!
Breaking