ಅರಂತೋಡು ನುಸ್ರತ್ತುಲ್ ಇಸ್ಲಾಂ ಮದರಸದಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವು ಸುಜ್ಞಾನ ಉತ್ತಮ ನಾಳೆಗಾಗಿ ಎಂಬ ಧ್ಯೇಯ ವಾಕ್ಯದೊಂದಿಗೆ ಪುನರಾರಂಭಗೊoಡಿತು.

ಅಧ್ಯಕ್ಷತೆಯನ್ನು ಜಮಾ ಅತ್ ಅಧ್ಯಕ್ಷ ಅಶ್ರಫ್ ಗುಂಡಿ ವಹಿಸಿದ್ದರು. ಅರಂತೋಡು ಬದ್ರಿಯಾ ಜುಮಾ ಮಸೀದಿ ಖತೀಬರಾದ ಇಸ್ಮಾಯಿಲ್ ಫೈಝಿ ಗಟ್ಟಮನೆ ದುವಾವನ್ನು ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ತೆಕ್ಕಿಲ್ ಗ್ರಾಮೀಣ ಅಭಿವೃದ್ದಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಹಾಗೂ ಅನ್ವಾರುಲ್ ಹುಧಾ ಅಸೋಸಿಯೇಷನ್‌ನ ಗೌರವಾಧ್ಯಕ್ಷ ಟಿ ಎಂ ಶಹಿದ್ ತೆಕ್ಕಿಲ್ ಮಾತನಾಡಿ ವಿದ್ಯಾರ್ಥಿಗಳು ಮದರಸ ಶಿಕ್ಷಣದ ಜೊತೆಗೆ ಜೀವನದಲ್ಲಿ ಶಿಸ್ತನ್ನು ಮೂಡಿಸಿಕೊಳ್ಳಬೇಕು ಎಂದರು. ಇಲ್ಲಿನ ಹಿರಿಯರು ತಮ್ಮ ಮನೆಗಳನ್ನು ಮದರಸ ಶಿಕ್ಷಣಕ್ಕಾಗಿ ನೀಡಿದ್ದನ್ನುಶಾಹಿದ್ ರವರು ಸ್ಮರಿಸಿಕೊಂಡರು.

ಸದರ್ ಜಿ.ಕೆ ಅಶ್ರಫ್ ಮುಸ್ಲಿಯಾರ್ ಅಡ್ಕಾರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಅಲ್ಲಿ ಮ್ ಅಬ್ದುಲ್ ರಹಿಮತ್ ಮುಸ್ಲಿಯಾರ್ ಜಮಾಅತ್ ಕಾರ್ಯದರ್ಶಿ ಕೆ ಎಂ ಮೂಸಾನ್ ಕೋಶಾಧಿಕಾರಿ ಕೆ ಎಂ ಅಬೂಬಕ್ಕರ್ ಪಾರೆಕಲ್, ಮದರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಅಮೀರ್ ಕುಕ್ಕುಂಬಳ, ಎ ಎಚ್ ವೈ ಎ ಅಧ್ಯಕ್ಷ ಅಬ್ಬುಲ್ ಮಜೀದ್ಎಸ್ ಎಂ, ಕಾರ್ಯದರ್ಶಿ ಪಸೀಲು, ಜಮಾಅತ್ ನಿರ್ದೇಶಕರಾದ ಎ ಹನೀಫ್, ಸಂಶುದ್ದೀನ್ ಪೆಲ್ತಡ್ಕ, ಮುಜೀಬ್ ರಂತೋಡು, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಜುಬೈರ್, ಸಂಶುದ್ದೀನ್ ಕ್ಯೂರ್, ಮೊಯಿದು ಕುಟ್ಟಿ, ಹನೀಫ್ ಕುಕ್ಕುಂಬಳ, ಹಕೀಮ್ ಕೊಡಂಕೇರಿ ಮೊದಲಾದವರು
ಉಪಸ್ಥಿತರಿದ್ದರು. ಅಮೀರ್ ಕುಕ್ಕುಂಬಳ ಕಾರ್ಯಕ್ರಮ ನಿರೂಪಿಸಿದರು.