Home Uncategorized ಅಡ್ಕಾರು : ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ “ಹಲ್ಲುಗಳ ಸುರಕ್ಷತೆ ಬಗ್ಗೆ ಉಚಿತ ಮಾಹಿತಿ ಕಾರ್ಯಾಗಾರ...

ಅಡ್ಕಾರು : ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ “ಹಲ್ಲುಗಳ ಸುರಕ್ಷತೆ ಬಗ್ಗೆ ಉಚಿತ ಮಾಹಿತಿ ಕಾರ್ಯಾಗಾರ ಮತ್ತು ತಪಾಸಣೆ

0

ಅಡ್ಕಾರಿನ ಬಿಎಸ್‌ಜಿ ಸೇವಾ ಕೇಂದ್ರ ವತಿಯಿಂದ ಮಕ್ಕಳಿಗೆ ಟೂತ್ ಪೇಸ್ಟ್ ವಿತರಣೆ

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾ. ಘಟಕ ಇದರ ವತಿಯಿಂದ ಬಿಎಸ್‌ಜಿ ಸೇವಾ ಕೇಂದ್ರ ಅಡ್ಕಾರು, ವಿಜಯ ಗ್ರಾಮಾಭಿವೃದ್ಧಿ ಸಮಿತಿ ಜಾಲ್ಸೂರು, ಸೂಂತೋಡು ಡೆಂಟಲ್ ಕೇರ್ ಸುಳ್ಯ, ಎಸ್‌ಡಿಎಂಸಿ ಸ.ಹಿ.ಪ್ರಾ.ಶಾಲೆ ಜಾಲ್ಸೂರು ಇವರ ಸಹಯೋಗದೊಂದಿಗೆ “ಹಲ್ಲುಗಳ ಸುರಕ್ಷತೆ ಬಗ್ಗೆ ಉಚಿತ ಮಾಹಿತಿ ಕಾರ್ಯಾಗಾರ ಮತ್ತು ತಪಾಸಣೆ
ಹಾಗೂ ಮಕ್ಕಳಿಗೆ ಟೂತ್ ಪೇಸ್ಟ್ ವಿತರಣೆ” ಎ. 8 ರಂದು ಸ.ಹಿ.ಪ್ರಾ.ಶಾಲೆ ಅಡ್ಕಾರು ಜಾಲ್ಸೂರು ಇಲ್ಲಿ ನಡೆಯಿತು.

ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಗಣೇಶ್ ಅಂಬಾಡಿಮೂಲೆ ಅಧ್ಯಕ್ಷತೆ ವಹಿಸಿದ್ದರು.

ಸುಳ್ಯದ ಸೂಂತೋಡು ಡೆಂಟಲ್ ಕೇರ್ ದಂತ ವೈದ್ಯೆ ಡಾ.ಶ್ರಮಿಕ ಹಲ್ಲಿನ ಸುರಕ್ಷತೆ ಬಗ್ಗೆ ಮಾಹಿತಿ ಕಾರ್ಯಗಾರ ನಡೆಸಿ ತಪಾಸಣೆ ನಡೆಸಿದರು.


ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಕೊಯಿಂಗೋಡಿ , ಜಾಲ್ಸೂರು ವಿಜಯ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ, ಶಾಲಾ ಮುಖ್ಯ ಶಿಕ್ಷಕಿ
ಶ್ರೀಮತಿ ವಸಂತಿ, ಶಾಲೆಯ ಹಿರಿಯ ವಿದ್ಯಾರ್ಥಿ ಶ್ರೀಧರ ಕಜೆಗದ್ದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜರ್ನಲಿಸ್ಟ್ ಯೂನಿಯನ್ ಸುಳ್ಯ ಘಟಕದ ಕಾರ್ಯದರ್ಶಿ ಗಣೇಶ ಕುಕ್ಕುತಡಿ ಕಾರ್ಯಕ್ರಮ ನಿರ್ವಹಿಸಿದರು. ಅಡ್ಕಾರಿನ ಬಿಎಸ್‌ಜಿ ಸೇವಾ ಕೇಂದ್ರ ವತಿಯಿಂದ ಶಾಲಾ ಮಕ್ಕಳಿಗೆ ಟೂತ್ ಪೇಸ್ಟ್ ಮತ್ತು ಸಿಹಿ ತಿಂಡಿ ವಿತರಿಸಲಾಯಿತು.

ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರ ಶರೀಫ್ ಜಟ್ಟಿಪಳ್ಳ, ಶಾಲಾ ಸಹಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಸಹಕರಿಸಿದರು.

NO COMMENTS

error: Content is protected !!
Breaking