ಶ್ರೀ ದೇವರ ನೃತ್ಯ ಬಲಿ – ಬಟ್ಟಲು ಕಾಣಿಕೆ – ಪ್ರಸಾದ ವಿತರಣೆ

ಕೊಡಗು ಸಂಪಾಜೆ ಕೊಡಗು ಸಂಪಾಜೆ ಶ್ರೀ ಪಂಚಲಿಂಗೇಶ್ವರ ಕಾಲಾವಧಿ ಜಾತ್ರೋತ್ಸವ ಏಪ್ರಿಲ್ 11 ಮತ್ತು 12 ರಂದು ವಿಜೃಂಭಣೆಯಿಂದ ನಡೆಯಿತು.
ಏ.11 ರಂದು ಬೆಳಿಗ್ಗೆ ಉಗ್ರಾಣ ತುಂಬಿಸುವುದು , ಪರಿವಾರ ದೈವಗಳ ತಂಬಿಲ,ಮಧ್ಯಾಹ್ನ ಮಹಾ ಪೂಜೆ , ಪ್ರಸಾದ ವಿತರಣೆ ನಡೆಯಿತು. ಸಂಜೆ 6 ಗಂಟೆಗೆ ತಂತ್ರಿಗಳ ಆಗಮನ , ದೇವತಾ ಪ್ರಾರ್ಥನೆ, ಪಶುಧಾನ ಪುಣ್ಯಾಹ, ಪ್ರಸಾದ ಶುದ್ಧಿ , ರಾಕ್ಷೋಘ್ನ , ವಾಸ್ತು ಹೋಮ ವಾಸ್ತು ಬಲಿ, ರಂಗ ಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು. ಬಳಿಕ ಅಪ್ಪು ಮೆಲೋಡೀಸ್ ಕುದ್ರೆಪಾಯ ತಂಡದಿಂದ ಸಂಗೀತ ರಸಮಂಜರಿ, ಜೈ ಭಜರಂಗಿ ಭಜನಾ ತಂಡ ಕೊಡಗು ಸಂಪಾಜೆ , ಶ್ರೀ ಪಂಚಾಕ್ಷರಿ , ಜೈ ಗುರುಜಿ ಭಜನಾ ತಂಡ , ಶ್ರೀ ಮಹಾಗಣಪತಿ ಭಜನಾ ತಂಡ ಕೊಯನಾಡು, ಶ್ರೀ ಚಾಮುಂಡೇಶ್ವರಿ ಭಜನಾ ತಂಡ ದೇವರಕೊಲ್ಲಿ ತಂಡಗಳಿಂದ ಭಜನಾ ಕಾರ್ಯಕ್ರಮ, ವಿದುಷಿ ಇಂದುಮತಿ ನಾಗೇಶ್ ನಿರ್ದೇಶನದ ನಟರಾಜ ನೃತ್ಯ ನಿಕೇತನ ರಿ ಕಲ್ಲುಗುಂಡಿ ವತಿಯಿಂದ ಭರತ ನಾಟ್ಯ ವೈಭವ , ವಿದುಷಿ ಪ್ರೇಮಾಂಜಲಿ ಆಚಾರ್ಯ ನಾಟ್ಯ ಮಯೂರಿ ನೃತ್ಯ ಟ್ರಸ್ಟ್ ವಿರಾಜಪೇಟೆ ವತಿಯಿಂದ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಿತು.
ಏಪ್ರಿಲ್ 12 ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ , ಬಿಂಬ ಶುದ್ಧಿ, ಕಲಶ ಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಬಳಿಕ ಕುಣಿತ ಭಜನೆ, ಆದ್ಯ ಮತ್ತು ಆರಾಧ್ಯ ರಿಂದ ಭರತ ನಾಟ್ಯ, ಶ್ರೀ ಮಹಾವಿಷ್ಣು ಮಹಿಳಾ ಮಂಡಲ ಅನ್ಯಾಳ, ಶ್ರೀ ದೇವಿ ದಬ್ಬಡ್ಕ ಕಾಂತಬೈಲು, ಯುವ ಕೇಸರಿ ಯುವಕ ಭಜನಾ ಮಂಡಳಿ ಬಾಲೆoಬಿ, ಮಂಜುನಾಥ ಭಜನಾ ಬಾಲೆoಬಿ , ಶ್ರೀ ದೇವಿ ಭಜನಾ ಮಂಡಳಿ ಕುದ್ರೇಪಾಯ, ಶ್ರೀ ಧರ್ಮಶ್ರೀ ಮಾರ್ಪಡ್ಕ , ಶ್ರೀ ವಿಷ್ಣು. ಮಹಿಳಾ ಮಂಡಳಿ ದ.ಕ ಸಂಪಾಜೆ , ವಿವೇಕಾನಂದ ಯುವಕ ಭಜನಾ ಮಂಡಲ ದೇವಾಲಯ ತಂಡಗಳಿoದ ಭಜನಾ ಕಾರ್ಯಕ್ರಮ , ರಾತ್ರಿ 8 ರಿಂದ ದೀಪಾರಾಧನೆ , ಹಸುವಿನ ಪೂಜೆ, ಭೂತ ಬಲಿ ಬಳಿಕ ಶ್ರೀ ದೇವರ ನೃತ್ಯ ಬಲಿ, ಬಟ್ಟಲು ಕಾಣಿಕೆ ಪ್ರಸಾದ ವಿತರಣೆ ನಡೆಯಿತು. ಊರ – ಪರವೂರಿನಿoದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಶ್ರೀ ದೇವರ ಪ್ರಸಾದ ಪಡೆದು ನೃತ್ಯ ಬಲಿಯನ್ನು ಕಣ್ತುಂಬಿಕೊಂಡರು. ಬಳಿಕ ಮಹಾ ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಗೌರವಾಧ್ಯಕ್ಷ ರಾಜಾರಾಮ ಕೀಲಾರು, ಶ್ಯಾo ಭಟ್, ಇಂದಿರಾ ದೇವಿ ಪ್ರಸಾದ್, ಮೊಕ್ತೇಸರ ಎಂ. ಬಿ ಸದಾಶಿವ, ಅಧ್ಯಕ್ಷ ಜಯಕುಮಾರ್ ಚಿದ್ಕಾರ್, ಕಾರ್ಯದರ್ಶಿ ಕೇಶವ ಚೌಟಾಜೆ, ಜಾತ್ರೋತ್ಸವ ಸಮಿತಿ ಕೋಶಾಧಿಕಾರಿ ಪದ್ಮಯ್ಯ ಬಿ.ಆರ್, ಅರ್ಚಕ ಸತ್ಯನಾರಾಯಣ ಭಟ್, ಪವಿತ್ರವಾಣಿ ಕೆ.ಜಿ ಗೋಪಾಲ ಕೃಷ್ಣ, ರಾಜಾರಾಮ ಕಳಗಿ, ರಮಾದೇವಿ ಬಾಲಚಂದ್ರ ಕಳಗಿ , ಸುರೇಶ್ ಪಿ.ಎಲ್,ಆಡಳಿತ ಮಂಡಳಿ ಸದಸ್ಯರಾದ ವಿಜಯ ಕನ್ಯಾನ, ಪ್ರೀತಮ್ ಬಂಟೋಡಿ, ಆನoದ ಕರಿಂಬಿ ,ರಿತಿನ್ ಡೆಮ್ಮಲೆ, ಆಡಳಿತ ಮಂಡಳಿ ಸದಸ್ಯರು ಹಾಗೂ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ, ಅಧ್ಯಕ್ಷ , ಪದಾಧಿಕಾರಿಗಳು ಸರ್ವ ಸದಸ್ಯರು , ಊರಿನ ಯುವಕ – ಯುವತಿ ಮಂಡಲ , ಊರಿನವರು ಉಪಸ್ಥಿತರಿದ್ದರು.