ಜು. 23: ಸುಳ್ಯ ಮರಾಟಿ ಸಮಾಜ ಸೇವಾ ಸಂಘದ ವಾರ್ಷಿಕ ಸಭೆ ಬಗ್ಗೆ ಪೂರ್ವಭಾವಿ ಸಭೆ

0

ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ ಜು. 23ರಂದು ಸಂಘದ ಸಭಾಭವನ ಗಿರಿದರ್ಶಿನಿಯಲ್ಲಿ ಜರಗಲಿದ್ದು, ಈ ಬಗ್ಗೆ ಪೂರ್ವಭಾವಿ ಸಭೆ ಸಂಘದ ಅಧ್ಯಕ್ಷ ಜನಾರ್ಧನ ಬಿ. ಕುರುಂಜಿಭಾಗ್ ರವರ ಅಧ್ಯಕ್ಷತೆಯಲ್ಲಿ ಜೂ. 18ರಂದು ನಡೆಯಿತು.

ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಗಿರಿಜಾ ಜೆ. ನಾಯ್ಕ್ ಕೊಡಿಯಾಲಬೈಲು, ಪದಾಧಿಕಾರಿಗಳು ಮತ್ತು ಸದಸ್ಯರು, ಯುವ ವೇದಿಕೆ ಅಧ್ಯಕ್ಷ ಮೋಹನ್ ಪೆರಾಜೆ, ಪದಾಧಿಕಾರಿಗಳು ಮತ್ತು ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದು, ಸಲಹೆ ಸೂಚನೆಗಳನ್ನು ನೀಡಿದರು. ಜು. 16ರಂದು ಸಮಾಜಬಾಂಧವರಿಗೆ ವಿವಿಧ ಕ್ರೀಡೆಗಳನ್ನು ನಡೆಸುವುದೆಂದು ನಿರ್ಣಯಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜ ಬಾಂಧವರನ್ನು ಮಹಾಸಭೆಯಲ್ಲಿ ಗೌರವಿಸುವುದೆಂದು ನಿರ್ಣಯಿಸಲಾಯಿತು. ಸಂಘದ ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ್ ಅಜ್ಜಾವರ ಸ್ವಾಗತಿಸಿ ನಿರ್ಣಯಗಳನ್ನು ದಾಖಲಿಸಿದರು. ಕೋಶಾಧಿಕಾರಿ ಭವಾನಿಶಂಕರ ಕಲ್ಮಡ್ಕ ವಂದಿಸಿದರು.