ಅಲೆಕ್ಕಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನ

0

ಅಲೆಕ್ಕಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪರಿಸರ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ನಿವೃತ್ತ ಶಿಕ್ಷಕರಾದ ಬಾಲಕೃಷ್ಣ ಹೇಮಾಳರವರು ಕಾರ್ಯಕ್ರಮ ಉಧ್ಘಾಟಿಸಿ ಪರಿಸರದ ಮಹತ್ವದ ಬಗ್ಗೆ ಮಾತನಾಡಿದರು.


ಎಸ್‌ಡಿಎಂಸಿ ಅಧ್ಯಕ್ಷ ಮಧು ಪಿ.ಆರ್. ರವರು ಶಾಲೆಯಲ್ಲಿ ಹಣ್ಣಿನ ಗಿಡಗಳ ನಾಟಿ ಮಾಡುವುದಲ್ಲದೆ ಸಂರಕ್ಷಿಸುವ ಬಗ್ಗೆ ಮಕ್ಕಳಿಗೆ ತಿಳಿಸಿದರು. ಪರಿಸರ ಸ್ನೇಹಿ ದಯಪ್ರಸಾದ್ ಚೀಮುಳ್ಳು ಹಣ್ಣಿನ ಗಿಡಗಳನ್ನು ವಿತರಿಸಿದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ನಿಂತಿಕಲ್ಲು ವಲಯದ ಅಧ್ಯಕ್ಷರಾದ ವಸಂತ್ ನಿಂತಿಕಲ್ಲ್ ಉಪಸ್ಥಿತರಿದ್ದು, ಶುಭ ಹಾರೈಸಿದರು. ವಿಪತ್ತು ನಿರ್ವಹಣಾ ಸಯೋಜಕ ದಿನೇಶ್ ಉಪಸ್ಥಿತರಿದ್ದರು.
ಶಾಲಾ ಪ್ರಭಾರ ಮುಖ್ಶೋಪಾಧ್ಶಾಯಿನಿ ಪೂರ್ಣಿಮಾ ಮಕ್ಕಳಿಗೆ ಪರಿಸರ ಉಳಿಸುವ ಬಗ್ಗೆ ಮಾತನಾಡಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಪರಿಸರದ ಚಿತ್ರ ಬಿಡಿಸುವ ಸ್ಪರ್ದೆ ಹಾಗೂ ಎಲೆ ಗುರುತಿಸುವಿಕೆ, ಪರಿಸರಗೀತೆ, ಪ್ರಬಂಧ ಸ್ಪರ್ದೆಯನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.


ಕೃಷಿ ಅಧಿಕಾರಿ ರಮೇಶ್ ಗ್ರಾಮಭಿವೃಧ್ಧಿ ಯೋಜನೆಯ ಸಮುದಾಯದ ಕಾರ್ಯಕ್ರಮಗಳ ಕುರಿತು ಪರಿಸರ ಕಾರ್ಯಕ್ರಮ ನಡೆಸುವ ಸದುದ್ದೇಶ ಬಗ್ಗೆ ಮಾಹಿತಿ ನೀಡಿದರು.
ನಂತರ ಶಾಲಾ ಪರಿಸರದಲ್ಲಿ ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಯಿತು. ಎಸ್‌ಡಿಎಂಸಿ ಪದಾಧಿಕಾರಿಗಳು, ಒಕ್ಕೂಟ ಪದಾಧಿಕಾರಿಗಳು ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಮೇಲ್ವಿಚಾರಕರಾದ ಶ್ರೀಮತಿ ಹೇಮಲತಾ ಸ್ವಾಗತಿಸಿ, ಶಾಲಾ ಶಿಕ್ಷಕಿ ನಳಿನಾಕ್ಷಿ ವಂದಿಸಿದರು. ಸೇವಾಪ್ರತಿನಿಧಿ ವಿಶಾಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು.