ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕಿ ಪ್ರೊ. ಭಾಗ್ಯಜ್ಯೋತಿ ಕೆ.ಎಲ್.ರವರಿಗೆ ಡಾಕ್ಟರೇಟ್ ಪದವಿ

0

ಕೆ.ವಿ.ಜಿ. ತಾ೦ತ್ರಿಕ ಮಹಾವಿದ್ಯಾಲಯದ ಅಸೋಸಿಯೇಟ್ ಪ್ರೊಫೆಸರ್ ಭಾಗ್ಯಜ್ಯೋತಿ ಕೆ.ಎಲ್, ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ಇವರ ಸಂಶೋಧನಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇವರು ಪ್ರೊಫೆಸರ್ ಡಾ. ವಾಸುದೇವ, ಇನ್‌ಫಾರ್ಮೇಶನ್ ಸೈನ್ಸ್ & ಇಂಜಿನಿಯರಿಂಗ್, NMAMIT, Nitte ಇವರ ಮಾರ್ಗದರ್ಶನದಲ್ಲಿ “Human Behavior Analysis and Classification in Video Streams using graph based methods” ಎಂಬ ವಿಷಯದ ಕುರಿತು ಮಹಾಪ್ರಬಂಧವನ್ನು ಮಂಡಿಸಿದ್ದರು.

ಇವರ ಹಲವಾರು ಪ್ರಬಂಧಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಣೆಗೊಂಡಿದೆ. ಇವರು ಲಿಂಗಪ್ಪ ಗೌಡ, ಕೇರ್ಪಳ ಮತ್ತು ಶ್ರೀಮತಿ ಪದ್ಮಾವತಿ ದಂಪತಿಗಳ ಪುತ್ರಿ ಹಾಗೂ ಡಾ. ಅಶೋಕ್ ಕುಮಾರ್ ನಿಡ್ಯಮಲೆ ಇವರ ಪತ್ನಿ. ಇವರು ಸುಮಾರು ೧9 ವರ್ಷಗಳಿಂದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರನ್ನು ಕೆ.ವಿ.ಜಿ. ಕಾಲೇಜ್ ಆಫ್ ಇಂಜಿನಿಯರಿಂಗ್ ಸುಳ್ಯ ಇದರ ಗವರ್ನಿಂಗ್ ಕೌನ್ಸಿಲ್ ಅಧ್ಯಕ್ಷರಾದ ಡಾ. ರೇಣುಕಾಪ್ರಸಾದ್ ಕೆ. ವಿ., ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಉಜ್ವಲ್ ಯು.ಜೆ., ಪ್ರಾಂಶುಪಾಲ ಡಾ. ಸುರೇಶ ವಿ., ಉಪಪ್ರಾಂಶುಪಾಲ ಡಾ. ಶ್ರೀಧರ್ ಕೆ. ಅಭಿನಂದಿಸಿರುತ್ತಾರೆ.