ಎನ್ ಐ ಎ ಕಾರ್ಯಾಚರಣೆ : ಸೋಮವಾರಪೇಟೆಯಲ್ಲಿನ ಆರೋಪಿಗಳ ಮನೆಯಲ್ಲಿ ಮಹತ್ವದ ದಾಖಲೆ ವಶ

0

ಬಿಜೆಪಿ ಯುವಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ಆರೋಪಿಗಳ ಸಂಬಂಧಿಕರ ಮನೆಗಳಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ ಐ ಎ) ತಪಾಸಣೆ ಕೈಗೊಂಡು ಮಹತ್ವದ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ.

ಸೋಮವಾರಪೇಟೆಯಲ್ಲಿನ ಅಬ್ದುಲ್ ನಾಸೀರ್, ಅಬ್ದುಲ್ ರೆಹಮಾನ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ನೌಶಾದ್ ಅವರುಗಳ ಮನೆಯಲ್ಲಿ ಕೆಲವು ಎಲೆಕ್ಟ್ರಾನಿಕ್ಸ್ ಉಪಕರಣಗಳು, ಮಹತ್ವದ ದಾಖಲೆ ಪತ್ರಗಳು ಎನ್ ಐ ಎ ದಾಳಿ ಸಂದರ್ಭ ದೊರಕಿದೆ ಎನ್ನಲಾಗಿದ್ದು ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಿಗೆ ಈ ಮೂವರೂ ನೆರವು ನೀಡಿದ್ದಾರೆ ಎಂಬ ಬಲವಾದ ಸಾಕ್ಷ್ಯಗಳೂ ದೊರಕಿದೆ ಎಂದು ಹೇಳಲಾಗುತ್ತಿದೆ.

ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಐವರು ಆರೋಪಿಗಳಲ್ಲಿ ಸೋಮವಾರಪೇಟೆಯ ಅಬ್ದುಲ್ ನಾಸೀರ್, ಅಬ್ದುಲ್ ರೆಹಮಾನ್ ಕೂಡ ಇದ್ದಾರೆ. ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಸೀರ್, ರೆಹಮಾನ್ ಸೇರಿದಂತೆ ಈವರೆಗೆ ೨೨ ಮಂದಿ ಆರೋಪಿಗಳ ವಿರುದ್ದ ಎನ್ ಐ ಎ ಚಾರ್ಜ್ ಶೀಟ್ ದಾಖಲಿಸಿದೆ.