ಗುತ್ತಿಗಾರಿನಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ಸಮಾರಂಭದ ವೇದಿಕೆ ಏರದೇ ತೆರಳಿದ ಜನ ಪ್ರತಿನಿಧಿಗಳು
ಗುತ್ತಿಗಾರಿನ ಪಿ.ಯಂ.ಶ್ರೀ ಸ.ಮಾ.ಹಿ.ಪ್ರಾ.ಶಾಲೆಯಲ್ಲಿಶಿಕ್ಷಣ ಇಲಾಖೆಯ ವತಿಯಿಂದ ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾಟ ಇಂದು ನಡೆಯುತ್ತಿದ್ದು ಉದ್ಘಾಟನೆ ಸಮಾರಂಭ ಕ್ಕೆ ಆಗಮಿಸಿದ ಕೆಲ ಜನ ಪ್ರತಿನಿಧಿಗಳು ನೀತಿ ಸಂಹಿತೆ ಕಾರಣ ಹಿಂತಿರುಗಿದ ಹಾಗೂ ಕೆಲ ಜನ ಪ್ರತಿನಿಧಿಗಳು ಬಾರದೆ ಕೂತ ಘಟನೆ ವರದಿಯಾಗಿದೆ.
ವಿಧಾನ ಪರಿಷತ್ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಇದ್ದ ಕಾರಣ ಉದ್ಘೋಷಕರು, ಜನಪ್ರತಿನಿಧಿಗಳು ವೇದಿಕೆಗೆ ಹತ್ತದಂತೆ ವಿನಂತಿಸಿದರು. ಆದ್ದರಿಂದ ಜನ ಪ್ರತಿನಿಧಿಗಳ ವೇದಿಕೆ ಏರದೆ ದೂರ ಉಳಿದರು. ಕಾರ್ಯಕ್ರಮಕ್ಕೆ ಬರಬೇಕಾಗಿದ್ದ ಕೆಲ ನಾಯಕರು ಬಂದಿರಲಿಲ್ಲ.