ಪೆರಾಜೆ ಜ್ಯೋತಿ ಪ್ರೌಢ ಶಾಲೆಯಲ್ಲಿ ಸತ್ಯಸಾಯಿ ಸೇವಾ ಕೇಂದ್ರ ಚೊಕ್ಕಾಾಡಿ ಇದರ ಆಶ್ರಯದಲ್ಲಿ ಆರೋಗ್ಯ ಮಾಹಿತಿ ಹಾಗೂ ತಪಾಸಣಾ ಶಿಬಿರ ಕಾರ್ಯಕ್ರಮ ಜೂ.30 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಸಂಚಾಲಕರಾದ ತೇಜಪ್ರಸಾದ್ ಕೆ.ಬಿ., ಆಧ್ಯಾತ್ಮಿಕ ಜಿಲ್ಲಾ ಸಮಿತಿಯ ಜಯರಾಮ್ ಭಾರದ್ವಾಜ್ ವಿದ್ಯಾರ್ಥಿಗಳಿಗೆ ಓಂಕಾರದ ಮಹತ್ವ ಎಂಬ ವಿಷಯದ ಕುರಿತು ಮಾಹಿತಿ ನೀಡಿದರು.ಉದ್ಯಾವನ ಆಸ್ಪತ್ರೆೆಯ ವೈದ್ಯರಾದ ಶ್ರೀಮತಿ ಸಾಯಿಗೀತಾ ಜ್ಞಾನೇಶ್‌ರವರು ಆರೋಗ್ಯ ಹಾಗೂ ಸ್ವಚ್ಛತೆ ಕಾಪಾಡುವಲ್ಲಿ ವಿಷಯದ ಕುರಿತು ವಿದ್ಯಾಾರ್ಥಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡೆಸಿ ಔಷಧಿಗಳನ್ನು ಉಚಿತವಾಗಿ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಯೋತಿ ವಿದ್ಯಾಸಂಘದ ಅಧ್ಯಕ್ಷರಾದ ಡಾ॥ ಎನ್.ಎ.ಜ್ಞಾನೇಶ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೆವಿಜಿ ಮೆಡಿಕಲ್ ಕಾಲೇಜಿನ ವೈದ್ಯರಾದ ಡಾ॥ ನಿತಿನ್, ಶಾಲಾ ಸಂಚಾಲಕರಾದ ಶ್ರೀ ಹರಿಶ್ಚಂದ್ರ ಮುಡ್ಕಜೆ, ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮುಖ್ಯಶಿಕ್ಷಕರಾದ ಜಿ.ಆರ್ ನಾಗರಾಜ್ ಸ್ವಾಗತಿಸಿ, ಕಚೇರಿ ಅಧೀಕ್ಷಕರಾದ ಚಂದ್ರಮತಿ ಕೆ.ವಂದಿಸಿದರು.