ಅರಂಬೂರು ಮಜಿಗುಂಡಿಯಲ್ಲಿ ಬರೆ ಕುಸಿದು ಮನೆಗೆ ಹಾನಿ

0

ಆಲೆಟ್ಟಿ ಗ್ರಾಮದ ಅರಂಬೂರು ಮಜಿಗುಂಡಿ ಎಂಬಲ್ಲಿ ಅಶೋಕ ಎಂಬವರ ಮನೆಯ ಹಿಂಬದಿಯ ಬರೆ ಕುಸಿದ ಘಟನೆ ಇಂದು ಮಧ್ಯಾಹ್ನ ದ ವೇಳೆಯಲ್ಲಿ ಸಂಭವಿಸಿದೆ.

ಮನೆಯ ಹಿಂಬದಿಯಲ್ಲಿ ಬರೆಯ ಮೇಲ್ಭಾಗದಲ್ಲಿ ಕಡಿದ ಮರದ ಕುತ್ತಿಯೊಂದು ಮಣ್ಣಿನೊಂದಿಗೆ ಜರಿದು ಬಂದು ಮನೆಯ ಗೋಡೆಗೆ ಬಡಿದಿದೆ. ಇದರಿಂದಾಗಿ ಮನೆಯ ಗೋಡೆ ಬಿರುಕು ಬಿಟ್ಟಿದ್ದು ಹಾನಿಯಾಗಿದೆ ಎಂದು ತಿಳಿದು ಬಂದಿದೆ.