ಮುರುಳ್ಯ ಪೂದೆ ಅವಳಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ

ಕೆಲಸ ಕಾಮಗಾರಿಗಳಿಗೆ ವೇಗ ನೀಡುವ ಸಲುವಾಗಿ ಭಕ್ತಾಧಿಗಳ ಮಹತ್ವದ ಸಭೆ-ವಿವಿಧ ಕಾರ್ಯಗಳ ನಿರ್ಣಯ

0

ಮುರುಳ್ಯ ಗ್ರಾಮದ ಪೂದೆ ಶ್ರೀ ಗಣಪತಿ ಮಲ್ಲಿಕಾರ್ಜುನ, ಶ್ರೀ ಮಹಾಗಣಪತಿ ಈ ಅವಳಿ ದೇವಸ್ಥಾನಗಳು ಜೀರ್ಣೋದ್ಧಾರಗೊಳ್ಳುತ್ತಿದ್ದು, ಕೆಲಸ ಕಾಮಗಾರಿಗಳಿಗೆ ವೇಗ ನೀಡುವ ಸಲುವಾಗಿ ಜು.1ರಂದು ದೇವಳದ ಅಧ್ಯಕ್ಷರುಗಳಾದÀ ಪದ್ಮನಾಭ ಪೂದೆ, ಭುವನೇಶ್ವರ ಪೂದೆ, ಕೇರ್ಪಡ ಶ್ರೀ ಮಹಿಷ ಮರ್ಧಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ನಡುಬೈಲುರವರ ಉಪಸ್ಥಿತಿಯಲ್ಲಿ ಮಹತ್ವದ ಸಭೆ ನಡೆಯಿತು.

ಕ್ಷೇತ್ರದ ದೈವಗಳಾದ ಶ್ರೀ ಶಿರಾಡಿ ರಾಜನ್ ದೈವ, ಉಳ್ಳಾಕುಲು, ಪಿಲಿಚಾಮುಂಡಿ ದೈವಸ್ಥಾನ ನಿರ್ಮಾಣ, ಅಂಗಣ ಪಂಜರ್ಲಿಗೆ ಕಟ್ಟೆ ನಿರ್ಮಾಣ, ಸುತ್ತು ಪಾಳಿಗಳ ನಿರ್ಮಾಣದ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಜೀರ್ಣೋದ್ಧಾರ ಕಾರ್ಯಕ್ಕೆ ಆರ್ಥಿಕ ಧನ ಸಹಾಯದ ಬಗ್ಗೆ ಪದಾಧಿಕಾರಿಗಳು, ಭಕ್ತಾದಿಗಳು ವಾಗ್ವಾದ ಮಾಡಿದರು. ಈ ಸಂದರ್ಭದಲ್ಲಿ ಸಮಿತಿ ಪಧಾದಿಕಾರಿಗಳು, ಭಕ್ತಾಧಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸಲಹೆ, ಸೂಚನೆ ನೀಡಿದರು.


ವರದಿ: ಸಂಕಪ್ಪ ಸಾಲಿಯಾನ್