ಭಾರತೀಯ ನೌಕಾ ಪಡೆಯ ದೀಕ್ಷಿತ್ ಕೆ.ಜೆ ಕೊಪ್ಪಡ್ಕ ಪ್ರಾನ್ಸ್ ನ ಪರೇಡ್ ಗೆ

0

ಕಲ್ಮಕಾರಿನ ದೀಕ್ಷಿತ್ ಕೆ.ಜೆ ಕೊಪ್ಪಡ್ಕ ಭಾರತೀಯ ನೌಕಾ ಪಡೆಯ ಯೋಧನಾಗಿದ್ದು ಜು.14 ರಂದು ಪ್ರಾನ್ಸ್ ನ ಪ್ಯಾರಿಸ್ ನಲ್ಲಿ ನಡೆಯಲಿರುವ ಬಾಸ್ಟಿಲ್ಲೆ ಡೇ ಪರೇಡ್ ನಲ್ಲಿ ಭಾಗವಹಿಸುತಿದ್ದಾರೆ.

ಭಾರತೀಯ ಮೂರು ದಳದ ಸೇನಾ ಪಡೆಗಳು ಇದರಲ್ಲಿ ಭಾಗವಹಿಸುತಿದ್ದು ಇದೇ ಕಾರ್ಯಕ್ರಮದಲ್ಲಿ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಅತಿಥಿ ಯಾಗಿ ಭಾಗವಹಿಸಲಿದ್ದಾರೆ. ಭಾರತದ ನೌಕಾಪಡೆಯ 64 ಸೈನಿಕರು ಇದರಲ್ಲಿ ಭಾಗವಹಿಸಲಿದ್ದು ಅದರಲ್ಲಿ ದೀಕ್ಷಿತ್ ಅವರು ಕೂಡ ಒಬ್ಬರು. ಇವರು ಈ ಹಿಂದೆ ಗಣರಾಜ್ಯೋತ್ಸವ ಪೆರೆಡ್ ನಲ್ಲೂ ಭಾಗವಹಿಸಿದ್ದರು.

ದೀಕ್ಷಿತ್ ಅವರು ಕಲ್ಮಕಾರಿನ ಜಯರಾಮ ಕೊಪ್ಪಡ್ಕ ಮತ್ತು ಪದ್ಮಾವತಿ ದಂಪತಿಗಳ ಪುತ್ರ.