ಮರ್ಕಂಜ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಮೂಡ್ನೂರು ಮರ್ಕಂಜ ಶಾಲೆಯಲ್ಲಿ ಜು.22ರಂದು ವನಮಹೋತ್ಸವ ವು ದೃಷ್ಟಿ ಚಾರಿ ಟೇಬಲ್ ಟ್ರಸ್ಟ್ ಬೆಂಗಳೂರು ಇದರ ವತಿಯಿಂದ ನಡೆಯಿತು.
















ಸಂಸ್ಥೆಯ ಮುಖ್ಯಸ್ಥರು ಹಾಗೂ ನಿವೃತ್ತ ಪ್ರಾಂಶುಪಾಲರು ಅದ ಬಾಲಕೃಷ್ಣ ಭಟ್ ಕೋಡಂಕೇರಿ ರವರು ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಅಭಿವೃದ್ಧಿಗೆ ರೂ. 10,000 ಚೆಕ್ಕನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಿಗೆ ಹಾಗೂ ಮುಖ್ಯಪಾದ್ಯಾಯರಿಗೆ ಹಸ್ತಾಂತರಿಸಿದರು. ಮುಂದೆಯೂ ಶಾಲಾ ಅಭಿವೃದ್ಧಿಗೆ ಸಹಕಾರ ನೀಡುವದಾಗಿ ಭರವಸೆ ನೀಡಿದರು. ಈ ಸಂದರ್ಭ ವೇದಿಕೆಯಲ್ಲಿ ಶಾಲಾ ಮೇಲುಸ್ತುವಾರಿ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಬೊಮ್ಮೇಟ್ಟಿ ಉಪಾಧ್ಯಕ್ಷರಾದ ಅನಿಲ್ ಕುಮಾರ್, ವಿಶೇಷ ಆಹ್ವಾನಿತ ರಾದ ಗೋವಿಂದ ಭಟ್ ಬಳ್ಳಕನ, ಗ್ರಾಮ ಪಂಚಾಯತ್ ಸದಸ್ಯರಾದ ಗೋವಿಂದ ಅಲವು ಪಾರೆ ಪೋಷಕರಾದ ಜಿ. ಜಗನ್ನಾಥ. ಜಯನಗರ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರಾದ ದೇವರಾಜ್ ರವರು ಸ್ವಾಗತಿಸಿ ಶಿಕ್ಷಕರಾದ ಬೆಳ್ಯಾಪ್ಪ ರವರು ಕಾರ್ಯಕ್ರಮ ನಿರೂಪಿಸಿ, ಸಹ ಶಿಕ್ಷಕಿ ಅಶ್ವಿನಿ ರವರು ವಂದಿಸಿದರು ಈ ಸಂದರ್ಭ ಶಾಲಾ ಪೋಷಕ ವೃಂದದವರು, ಹಾಗೂ ಶಾಲಾ ಮೇಲುಸ್ತುವಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು









