ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ 7ನೇ ವಾರ್ಷಿಕ ಮಹಾಸಭೆ

0

193 ಕೋಟಿ ವಾರ್ಷಿಕ ವ್ಯವಹಾರ: 38.47 ಲಕ್ಷ ಲಾಭ, ರಬ್ಬರ್ ವ್ಯವಹಾರ ಮಾಡಿದ ಸದಸ್ಯರಿಗೆ ಕೆ.ಜಿ.ಗೆ ರೂ 2ರಂತೆ ಪ್ರೋತ್ಸಾಹ ಧನ, ಸದಸ್ಯರಿಗೆ ಶೇ. 8 ಡಿವಿಡೆಂಡ್

ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ 7ನೇ ವಾರ್ಷಿಕ ಮಹಾಸಭೆಯು ಪೆರಾಜೆಯ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ಸೆಪ್ಟೆಂಬರ್ 17ರಂದು ನಡೆಯಿತು. ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ನಾಗೇಶ್ ಕುಂದಲ್ಪಾಡಿಯವರು ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮಕ್ಕಳ ಪ್ರಾರ್ಥನೆಯಿಂದ ಸಭೆ
ಪ್ರಾರಂಭವಾಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಎಚ್ ಕೆ ಇವರು ಸರ್ವರನ್ನು ಸ್ವಾಗತಿಸಿ, ವರದಿ ಮಂಡಿಸಿದರು.

ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಸಹಕಾರ ಸಂಘವು ವರದಿ ವರ್ಷದಲ್ಲಿ 193 ಕೋಟಿ ವಾರ್ಷಿಕ ವ್ಯವಹಾರವನ್ನು ನಡೆಸಿ 38.47 ಲಕ್ಷ ಲಾಭಗಳಿಸಿದೆ. ವಿಶೇಷವಾಗಿ ರಬ್ಬರ್ ವ್ಯವಹಾರ ಮಾಡಿದ ಸದಸ್ಯರುಗಳಿಗೆ ಕೆ.ಜಿಗೆ ರೂ 2 ರಂತೆ ಪ್ರೋತ್ಸಾಹ ಧನವನ್ನು ನೀಡಲು 5.95 ಲಕ್ಷಗಳ ಮೊತ್ತವನ್ನು ಕಾಯ್ದಿರಿಸಲಾಗಿದೆ. ಸದಸ್ಯರಿಗೆ ಶೇ. 8 ರಂತೆ ಡಿವಿಡೆಂಡ್ ಘೋಷಿಸಲಾಗಿದೆ ಎಂದು ಮಾತನಾಡಿದರು.

ವೇದಿಕೆಯಲ್ಲಿ ಉಪಾಧ್ಯಕ್ಷರಾದ ಅಶೋಕ ಪಿ ಎಂ, ನಿರ್ದೇಶಕರುಗಳಾದ ಹೊನ್ನಪ್ಪ ಅಮಚೂರು, ಜಯರಾಮ ನಿಡ್ಯಮಲೆ ಬಿ, ಸೀತಾರಾಮ ಕದಿಕಡ್ಕ, ಧನಂಜಯ ಕೋಡಿ, ಪ್ರಮೀಳ ಬಂಗಾರಕೋಡಿ, ಪುಷ್ಪಾವತಿ ವ್ಯಾಪಾರೆ, ಪ್ರದೀಪ ಕೆ.ಎಂ, ದೀನರಾಜ್ ದೊಡ್ಡಡ್ಕ, ಶೇಷಪ್ಪ ನಾಯ್ಕ ನಿಡ್ಯಮಲೆ, ಜಯರಾಮ ಪಿ. ಟಿ, ಕಿರಣ್ ಬಂಗಾರಕೋಡಿ ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಶಾಖಾ ವ್ಯವಸ್ಥಾಪಕರಾದ ಶ್ರೀನಿವಾಸ್ ಕೆ ಜಿ ಇವರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ನಿರ್ದೇಶಕರಾದ ಪ್ರಮೀಳಾ ಬಂಗಾರಕೋಡಿ ಅವರು ಸರ್ವರಿಗೂ ವಂದನಾರ್ಪಣೆಗೈದರು.