ಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯೆ ಶ್ರೀಮತಿ ರಾಜೀವಿ ರವರಿಗೆ ಉತ್ತಮ ಹೈನುಗಾರ ಪ್ರಶಸ್ತಿ

0

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಕುಲಶೇಖರ ಮಂಗಳೂರು 2023- 24ರ ಸಾಲಿನ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯೆ ಐವತ್ತೊಕ್ಲು ಗ್ರಾಮದ ಅಳ್ಪೆ ಮನೆ ಶಶಿಕರ ಪಿ ರವರ ಪತ್ನಿ ಶ್ರೀಮತಿ ರಾಜೀವಿ ಪಿ ರವರಿಗೆ ತಾಲೂಕುವಾರು ಮಧ್ಯಮ ವರ್ಗದ ಉತ್ತಮ ಹೈನುಗಾರ ಪ್ರಶಸ್ತಿ ಪಡೆದಿರುತ್ತಾರೆ.

ಒಕ್ಕೂಟದ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ ರವರು ಶ್ರೀಮತಿ ರಾಜೀವಿ ರವರನ್ನು ನಗದು,ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಒಕ್ಕೂಟದ ಉಪಾಧ್ಯಕ್ಷ, ನಿರ್ದೇಶಕರು, ಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಭಾಸ್ಕರ ನಾಯಕ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದರ್ಶ ಚಿದ್ಗಲ್ಲು ಉಪಸ್ಥಿತರಿದ್ದರು.