ನಿಮ್ಮ ಯಾವುದೇ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತನ್ನಿ : ಎಸ್‌ಐ ಸೂಚನೆ
ಸುಳ್ಯ ಆಟೋ ಚಾಲಕರು ಮತ್ತು ಟೂರಿಸ್ಟ್ ಕಾರು ವ್ಯಾನ್ ಚಾಲಕರ ಮತ್ತು ಮಾಲಕರೊಂದಿಗೆ ಸಮಾಲೋಚನೆ ಸಭೆಯನ್ನು ಸುಳ್ಯ ಪೊಲೀಸ್ ಠಾಣಾ ಎಸ್ ಐ ಸಂತೋಷ್ ರವರು ಸೆ ೧೯ ರಂದು ಸುಳ್ಯ ಪೊಲೀಸ್ ಠಾಣಾ ಸಭಾಂಗಣದಲ್ಲಿ ನಡೆಸಿದರು.
ಸಭೆಯಲ್ಲಿ ಭಾಗವಹಿಸಿದ್ದವರನ್ನು ಉದ್ಧೇಶಿಸಿ ಮಾತನಾಡಿದ ಎಸ್ ಐ ಸಂತೋಷ್ ‘ನಿಮ್ಮ ನಿಮ್ಮ ಪಾರ್ಕಿಂಗ್ ನಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾದರೆ ನಮ್ಮ ಗಮನಕ್ಕೆ ತನ್ನಿ. ನೀವು ನೀವೇ ಅದರ ಬಗ್ಗೆ ಚರ್ಚಿಸಿ ಯಾವುದೇ ರೀತಿಯ ಗಲಾಟೆಗಳನ್ನು ಮಾಡಿ ಕೊಳ್ಳ ಬಾರದು. ಅಲ್ಲದೆ ತಮ್ಮ ತಮ್ಮ ವಾಹನಗಳನ್ನು ಮುಖ್ಯ ರಸ್ತೆಯಲ್ಲಿ ಪಾರ್ಕಿಗ್ ಮಾಡಿ ಬೇರೆ ವಾಹನಗಳಿಗೆ ಸಮಸ್ಯೆ ನೀಡಬೇಡಿ.
ಮೋಟಾರು ಖಾಯ್ದೆ ನಿಯಮ ಗಳನ್ನು ಪೂರ್ಣ ವಾಗಿ ಪಾಲಿಸಿ ಪೊಲೀಸ್ ಇಲಾಖೆಗೆ ಸಹಕಾರ ನೀಡಿ. ಪರಿಸರದಲ್ಲಿ ಯಾವುದೇ ಅಹಿತಕರ ಘಟನೆ ಏನಾದರೂ ಕಂಡು ಬಂದಲ್ಲಿ ಠಾಣೆಗೆ ಮಾಹಿತಿ ನೀಡುವಂತೆ ಸೂಚಿಸಿದರು.
ಈ ವೇಳೆ ಚಾಲಕರೂ ಕೂಡ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿ ಸಮಾಲೋಚನೆ ನಡೆಸಿದರು.
ಸಭೆಯಲ್ಲಿ ಬಿ ಎಂ ಎಸ್ ಆಟೋ ಚಾಲಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ ಕಾರ್ಯದರ್ಶಿ ಚಂದ್ರಶೇಖರ ಮರ್ಕಂಜ, ಹಾಗೂ ಪದಾಧಿಕಾರಿಗಳು, ಸದಸ್ಯರು, ಆಟೋ ಚಾಲಕರು ಕಾರು ಮತ್ತು ವ್ಯಾನ್ ಚಾಲಕ ಸಂಘದ ಗಣೇಶ್ ಪ್ರಸಾದ್, ಹರಿ ಪ್ರಸಾದ್, ಚಂದ್ರ ಮೋಹನ್, ರಾಕೇಶ್ ಕ್ರಾಸ್ತ, ಹಾಗೂ ಬಸ್ ಮಾಲಕರಾದ ಮೋಹನ್, ವಿಠಲ್ ಅರಂಬೂರು ಹಾಗೂ ಅನೇಕ ಮಂದಿ ಚಾಲಕರುಗಳು ಭಾಗವಹಿಸಿದ್ದರು.