ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರಿಂದ ಶ್ರೀಘ್ರ ಸೂಕ್ತ ವ್ಯವಸ್ಥೆಗಾಗಿ ಸೂಚನೆ
ಕುಕ್ಕೆಶ್ರೀ ಸುಬ್ರಹ್ಮಣ್ಯದಲ್ಲಿ ಅನಧಿಕೃತ ಬೀದಿ ಬದಿ ಅಂಗಡಿಗಳನ್ನು ತೆರವುಗೊಳಿಸಿರುವುದನ್ನು ಮಾನವೀಯ ನೆಲೆಯಲ್ಲಿ, ಕಾನೂನಾತ್ಮಕವಾಗಿ
ಮತ್ತೆ ಅವಕಾಶ ನೀಡುವಂತೆ
ಸಂಸದ ಬ್ರಿಜೇಶ್ ಚೌಟರಿಂದ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ.
ಅದೆಷ್ಟೋ ವರುಷಗಳಿಂದ ಬೀದಿ ಬದಿ ವ್ಯಾಪಾರ ನಂಬಿ ಜೀವನ ಸಾಗಿಸುತಿದ್ದ ಸುಬ್ರಮಣ್ಯ ಪರಿಸರದ ಕೆಲ ನಿವಾಸಿಗಳಿಗೆ ಅಗಂಡಿ ತೆರವು ಬಳಿಕ ಜೀವನ ನಡೆಸಲು ಕಷ್ಟವಾಗಿತ್ತು. ಆದ್ದರಿಂದ ಕಡಬಕ್ಕೆ ಜ.13 ರಂದು ಆಗಮಿಸಿದ್ದ ಸಂಸದರನ್ನು ಭೇಟಿ ಮಾಡಿದ ಬೀದಿ ಬದಿ ವ್ಯಾಪಾರಿಗಳು ಮತ್ತೆ ಅಂಗಡಿ ತೆರಯಲು ಅವಕಾಶ ನೀಡುವಂತೆ ಮನವಿ ಅರ್ಪಿಸಿದ್ದರು. ಮನವಿಗೆ ಸ್ಪಂದಿಸಿದ ಸಂಸದರು ಜಿಲ್ಲಾಧಿಕಾರಿಗಳಿಗೆ ಮತ್ತು ಪುತ್ತೂರು ಉಪ ವಿಭಾಗ ಅಧಿಕಾರಿಯೊಂದಿಗೆ ಚರ್ಚಿಸಿ, ಅತೀ ಶೀಘ್ರವಾಗಿ ಬೀದಿ ವ್ಯಾಪಾರಿಗಳಿಗೆ, ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿ, ಅಧಿಕಾರಿಗಳಿಗೆ ಸೂಚಿಸಿದರು.