ಜೇಸಿಯಿಂದ ಉತ್ತಮ ನಾಯಕನ ಸೃಷ್ಟಿ : ಸವಿತಾರ ಮುಡೂರು

0

ಬೆಳ್ಳಾರೆ ಜೇಸಿಐನಿಂದ ಪುನಃಶ್ಚೇತನ ಶಿಬಿರ

ಯುವಕರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡುವುದರ ಜೊತೆಗೆ ಜೇಸಿ ಸಂಸ್ಥೆಯು ನಾಯಕತ್ವ ಗುಣ ರೂಪಿಸುವಲ್ಲಿ ಸಹಕಾರಿಯಾಗಿದೆ. ವ್ಯಕ್ತಿತ್ವ ವಿಕಸನದ ಮೂಲಕ ಸಮಾಜದಲ್ಲಿ ಉತ್ತಮ ನಾಯಕನನ್ನು ಸೃಷ್ಟಿಸುವಲ್ಲಿ ಜೇಸಿಯ ಪಾತ್ರ ಮಹತ್ತರವಾಗಿದೆ ಎಂದು ವಲಯ ತರಬೇತುದಾರ ಸವಿತಾರ ಮುಡೂರು ಹೇಳಿದರು.


ಅವರು ಬೆಳ್ಳಾರೆಯ ಜೇಸಿ ಭವನದಲ್ಲಿ ನಡೆದ ಪುನಃಶ್ಚೇತನ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ಬೆಳ್ಳಾರೆ ಜೇಸಿಐ ಘಟಕದ ಪೂರ್ವಧ್ಯಕ್ಷ ನಾರಾಯಣ ಭಟ್ ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಬೆಳ್ಳಾರೆ ಜೇಸಿಐ ಅಧ್ಯಕ್ಷ ಪ್ರದೀಪ್ ಕುಮಾರ್ ರೈ ಬೀಡು ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವಾಧ್ಯಕ್ಷ ಜಗದೀಶ್ ರೈ ಪೆರುವಾಜೆ ಉಪಸ್ಥಿತರಿದ್ದರು. ಕಾರ್ಯದರ್ಶಿ ಉಮೇಶ್ ಮಣಿಕ್ಕಾರ ವಂದಿಸಿದರು.