ಗಾಂಧಿನಗರ ಶುಭಶ್ರೀ ಮಹಿಳಾ ಮಂಡಲದ ವತಿಯಿಂದ “ಆಟಿಡೊಂಜಿ ದಿನ” ಕಾರ್ಯಕ್ರಮ

0

ಶುಭಶ್ರೀ ಮಹಿಳಾ ಮಂಡಲ ಗಾಂಧಿನಗರ ಸುಳ್ಯ ಮತ್ತು ಅಂಗನವಾಡಿ ಕೇಂದ್ರ ಗಾಂಧಿನಗರ ಇದರ ಸಂಯುಕ್ತ ಆಶ್ರಯದಲ್ಲಿ “ಆಟಿಡೊಂಜಿ ದಿನ” ಕಾರ್ಯಕ್ರಮ ವು ಅಂಗನವಾಡಿ ಕೇಂದ್ರ ಗಾಂಧಿನಗರ ದಲ್ಲಿ ನಡೆಯಿತು.


ಆಟಿ ಆಚರಣೆಯ ಮಹತ್ವದ ಬಗ್ಗೆ ನಿವೇದಿತಾ ಮಹಿಳಾ ಜಾಗ್ರತಿ ಸೇವಾ ಟ್ರಸ್ಟ್ ಇದರ. ಅಧ್ಯಕ್ಷೆ ಶ್ರೀಮತಿ ಇಂದಿರಾ ರೈ ಯವರು ತಿಳಿಸಿಕೊಟ್ಟರು.
ಶುಭಶ್ರೀ ಮಹಿಳಾ ಮಂಡಲದ ಸದಸ್ಯರು ತಂದ ವಿವಿಧ ಆಟಿ ತಿನಿಸು ಗಳನ್ನು ಎಲ್ಲರೂ ಸವಿದು ಸಂತಸಪಟ್ಟರು
ಈ ಸಂದರ್ಭದಲ್ಲಿ ಬಾಲವಿಕಾಸ ಸೇವಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ವನಿತಾ, ಆಡಳಿತ ಮಂಡಲಿಯ ಸದಸ್ಯರಾದ ಜೆ.ಕೆ.ರೈ ಮತ್ತು ಶರೀಪ್ ಕಂಠಿಯವರು ಉಪಸ್ಥಿತರಿದ್ದರು.


ಶುಭಶ್ರೀ ಮಹಿಳಾ ಮಂಡಲದ ಅದ್ಯಕ್ಷೆ ಶ್ರೀಮತಿ ಶಶಿಕಲಾ ಹರಪ್ರಸಾದ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಅಂಗನವಾಡಿ ಕೇಂದ್ರ ದ ಸಹಾಯಕಿ ಶ್ರೀಮತಿ ಪುಷ್ಪ, ಅಂಗನವಾಡಿ ಕೇಂದ್ರದ ಮಕ್ಕಳು ಮತ್ತು ಪೋಷಕರು ಉಪಸ್ಥಿತರಿದ್ದರು.ಮಹಿಳಾ ಮಂಡಲದ ಸದಸ್ಯೆ ಶ್ರೀಮತಿ ಶೋಭಾರವರು ಸ್ವಾಗತಿಸಿ ಸದಸ್ಯೆ ಶ್ರೀಮತಿ ಸುನಂದಾ ಶೆಟ್ಟಿ ಯವರು ವಂದಿಸಿದರು.