ಹಾಸ್ಟೆಲ್ ಜೊತೆ ಭೋಧನ ಸಾಮಾಗ್ರಿಗಳನ್ನೂ ಪೂರೈಸಲಿರುವ ಸಂಸ್ಥೆ
ಪುತ್ತೂರು : ಮುಂದಿನ ಸೆಪ್ಟೆಂಬರ್ ತಿಂಗಳಿನಲ್ಲಿ ರಾಜ್ಯದ್ಯಾಂತ್ಯ ಶಿಕ್ಷಕರ ನೇಮಕಾತಿಗಾಗಿ (ಟಿ.ಇ.ಟಿ) ಶಿಕ್ಷಕರ ಪ್ರವೇಶ ಪರೀಕ್ಷೆಯೂ ನಡೆಯಲಿದ್ದು ,ಇದಕ್ಕಾಗಿ ಪರೀಕ್ಷೆಯ ಪೂರ್ವ ತಯಾರಿ ಬಗ್ಗೆ ಎರಡು ದಿನಗಳ ತರಬೇತಿ ಶಿಬಿರವೂ ಇಲ್ಲಿನ ವಿದ್ಯಾಮಾತಾ ಅಕಾಡೆಮಿ ವತಿಯಿಂದ ನಡೆಯಲಿದೆ.
ಆ. 12 ಶನಿವಾರ ಮತ್ತು 13 ಭಾನುವಾರದಂದು ತರಗತಿಗಳು ನಡೆಯಲಿದ್ದು , ಸೆಪ್ಟೆಂಬರ್ 3ರಂದು ನಡೆಯಲಿರುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಬರೆಯಲು ಇಚ್ಛಿಸುವಂತಹ ಅಭ್ಯರ್ಥಿಗಳು ಈ ತರಬೇತಿಯನ್ನು ಸಂಪೂರ್ಣ ಸದುಪಯೋಗ ಪಡಿಸಿಕೊಳ್ಳುವಂತೆ ವಿದ್ಯಾಮಾತಾ ಅಕಾಡೆಮಿಯ ಆಡಳಿತ ಮಂಡಳಿಯು ತಿಳಿಸಿದೆ.
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಕಳೆದ ಸಾಲಿನಲ್ಲಿ ಏಪ್ಪತ್ತಕ್ಕೂ ಮಿಕ್ಕಿ ಆಭ್ಯರ್ಥಿಗಳೂ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದು ಉತ್ತಮ ಸಾಧನೆಯನ್ನು ಮಾಡಿರುತ್ತಾರೆ.ಅದೇ ರೀತಿಯಲ್ಲಿ ಈ ಬಾರಿಯೂ ಟಿ.ಇ.ಟಿ ತರಬೇತಿಯನ್ನು ಆಯೋಜನೆ ಮಾಡಲಾಗಿದೆ.
ತರಬೇತಿಯಲ್ಲಿ ಪಾಲ್ಗೊಳ್ಳುವ ಎಲ್ಲಾ ಶಿಬಿರಾರ್ಥಿಗಳಿಗೆ ಅಧ್ಯಯನಕ್ಕೆ ಸಂಬಂಧಿಸಿದ ಪೂರ್ವ ತಯಾರಿ ತರಬೇತಿ ಜೊತೆಗೆ ಸಂಪೂರ್ಣ ಅಧ್ಯಯನ ಸಾಮಗ್ರಿಗಳನ್ನು ಕೂಡ ಸಂಸ್ಥೆ ವತಿಯಿಂದ ಒದಗಿಸಿ ಕೊಡಲಾಗುತ್ತದೆ.
ತರಬೇತಿಯೂ ಬೆಳಗ್ಗೆ 10 ರಿಂದ ಸಾಯಂಕಾಲ 4:೦೦ ರವರೆಗೆ ನಡೆಯುತ್ತದೆ.
ದೂರದ ಊರಿನಿಂದ ಬರುವಂತಹ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆಯನ್ನೂ ಕೂಡ ಕಲ್ಪಿಸಲಾಗಿದ್ದು ,
ಮಾಹಿತಿಗಾಗಿ,
ವಿದ್ಯಾಮಾತಾ ಅಕಾಡೆಮಿ ಇದರ ದೂರವಾಣಿ ಸಂಖ್ಯೆ 9620468869
ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.