ಕೊಲ್ಲಮೊಗ್ರು ಗ್ರಾ.ಪಂ ಅಧ್ಯಕ್ಷರಾಗಿ ಜಯಶ್ರೀ ಚಾಂತಾಳ , ಉಪಾಧ್ಯಕ್ಷರಾಗಿ ಅಶ್ವಥ್ ಯಲದಾಳು ಆಯ್ಕೆ

0

ಕೊಲ್ಲಮೊಗ್ರು ಗ್ರಾ.ಪಂ ಅಧ್ಯಕ್ಷತೆ ಸಾಮಾನ್ಯ ಮಹಿಳೆ ಗೆ ಮೀಸಲಾಗಿದ್ದು ಜಯಶ್ರೀ ಚಾಂತಾಳ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿದ್ದು ಅಶ್ವಥ್ ಯಲದಾಳು ಅವರು ಆಯ್ಕೆಯಾದರು. ಜಯಶ್ರೀ ಅವರನ್ನು ಮೋಹಿನಿ ಕಟ್ಟ ಸೂಚಿಸಿದರು. ಅಶ್ವಥ್ ಅವರನ್ನು ಮಾದವ ಚಾಂತಾಳ ಸೂಚಿಸಿದರು.


ಗ್ರಾ.ಪಂ ಸದಸ್ಯರಾದ ಮಾದವ ಚಾಂತಾಳ, ಪುಷ್ಪರಾಜ್ ಪಡ್ಪು, ಮೋಹಿನಿ ಕಟ್ಟ, ಶುಭಲತಾ, ಜಯಶ್ರೀ, ಶಿವಮ್ಮ ಉಪಸ್ಥಿತರಿದ್ದರು. ಹಾಲಿ ಅಧ್ಯಕ್ಷ ಉದಯ ಕೊಪ್ಪಡ್ಕ ಯಾವುದೇ ಪ್ರಕ್ರಿಯೆಯಲ್ಲಿ ಹಾಜರಾಗಿಲ್ಲ.


ಚುನಾವಣಾ ಅಧಿಕಾರಿಯಾಗಿರುವ ಬಿ.ಇ.ಒ ರಮೇಶ್ , ಗ್ರಾ.ಪಂ ಪಿಡಿಒ ರವಿಚಂದ್ರ ಚುನಾವಣಾ ಪ್ರಕ್ರಿಯೆ ನಡೆಸಲು ಸಹಕರಿಸಿದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಕೆಯಾದ ಕಾರಣ ಯಾವುದೇ ಗೊಂದಲ ವಿಲ್ಲದೆ ಆಯ್ಕೆ ಪ್ರಕ್ರಿಯೆ ನಡೆಯಿತು.