ಮಡಪ್ಪಾಡಿ ಗ್ರಾಮ‌ ಪಂಚಾಯತ್ :ಅಧ್ಯಕ್ಷರಾಗಿ ಉಷಾ ಜಯರಾಮ್, ಉಪಾಧ್ಯಕ್ಷರಾಗಿ ಸುಜಾತ ಹಾಡಿಕಲ್ಲು ಅವಿರೋಧ ಆಯ್ಕೆ

0


ಮಡಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಶೀಮತಿ ಉಷಾ ಜಯರಾಮ್ ,ಉಪಾಧ್ಯಕ್ಷರಾಗಿ ಶ್ರೀಮತಿ ಸುಜಾತ ಹಾಡಿಕಲ್ಲು ಅವಿರೋಧವಾಗಿ ಆಯ್ಕೆ ಯಾದರು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಪ.ಪಂಗಡಕ್ಕೆ ಮೀಸಲಾಗಿತ್ತು. ಪಂಚಾಯತ್ ಆಡಳಿತದಲ್ಲಿ
ಒಟ್ಟು 5 ಮಂದಿ ಸದಸ್ಯರಿದ್ದು, 4 ಮಂದಿ ಕಾಂಗ್ರೆಸ್ ಬೆಂಬಲಿತ ಹಾಗೂ ಓರ್ವರು ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ.


ಅಧ್ಯಕ್ಷ ತೆಗೆ ಶ್ರೀಮತಿ ಉಷಾ ಜಯರಾಮ್ ಹಾಗೂ ಉಪಾಧ್ಯಕ್ಷ ತೆಗೆ ಸುಜಾತ ಹಾಡಿಕಲ್ಲು ಮಾತ್ರ ನಾಮಪತ್ರ ಸಲ್ಲಿಸಿದ್ದು ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿದ್ದ ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಸತೀಶ್ ಕೊಯಿಂಗಾಜೆ ಅಧಿಕೃತ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ನಿರ್ಗಮನ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಸದಸ್ಯರಾದ ಜಯರಾಮ ಹಾಡಿಕಲ್ಲು, ಶ್ರೀಮತಿ ಶರ್ಮಿಳಾ, ಮಡಪ್ಪಾಡಿ ಸಹಕಾರಿ ಸಂಘದ ಅಧ್ಯಕ್ಷರಾದ ಪಿ.ಸಿ.ಜಯರಾಮ್, ನಿರ್ದೇಶಕ ಸೋಮಶೇಖರ ಕೇವಳ,ಪಂಚಾಯತ್ ನೂತನ ಪಿಡಿಒ ಕೀರ್ತಿ ಪ್ರಸಾದ್ ಹಾಗೂ ಪಿಡಿಒ ಪ್ರವೀಣ್ ಕುಮಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.