ಸುಳ್ಯ ಹಾಗೂ ಪುತ್ತೂರು ತಾಲೂಕುಗಳನ್ನು ಸಂಪರ್ಕಿಸುವ ಪರ್ಲಿಕಜೆ ನಿಡುಬೆ ಕೊಚ್ಚಿ- ದುಗ್ಗಳ ಕಲ್ಲರ್ಪೆ- ಮಾವಿನಕಟ್ಟೆ ಅಂತರ್ ತಾಲೂಕು ಸಂಪರ್ಕ ರಸ್ತೆಯನ್ನು ಅಭಿವೃದ್ಧಿಗೊಳಿಸಿ ಕಾಂಕ್ರೀಟಿಕರಣ ಅಥವಾ ಡಾಮರೀಕರಣಗೊಳಿಸುವಂತೆ ಕೋರಿ ಐವರ್ನಾಡು ಮತ್ತು ಕೊಳ್ತಿಗೆ ಗ್ರಾಮದ ನಿವಾಸಿಗಳ ಪರವಾಗಿ ಸಂಸದರಾದ ಕ್ಯಾ.ಬ್ರಿಜೇಶ್ ಚೌಟರವರಿಗೆ ಮನವಿ ನೀಡಲಾಯಿತು.
ಮನವಿಯಲ್ಲಿ
ಸುಳ್ಯ ತಾಲೂಕಿನ ಪರ್ಲಿಕಜೆ, ನಿಡುಬೆ, ಜಬಳೆ, ಕೊಚ್ಚಿ, ದುಗ್ಗಳ- ಕಲ್ಲರ್ಪೆ- ಮಾವಿನಕಟ್ಟೆ ಮುಖಾಂತರ ಪುತ್ತೂರು ತಾಲೂಕನ್ನು ಸಂಪರ್ಕಿಸುವ ರಸ್ತೆ ಸ್ಥಳೀಯ ನಾಗರಿಕರಿಗೆ ತಮ್ಮ ದೈನಂದಿನ ಚಟುವಟಿಕೆಗಳಿಗೆ ಬಹುಮುಖ್ಯವಾದ ಮತ್ತು ಏಕಮಾತ್ರ ಸಂಪರ್ಕ ರಸ್ತೆಯಾಗಿದ್ದು, ಸ್ಥಳೀಯರಿಗೆ ಯಾವುದೇ ಪರ್ಯಾಯ ವ್ಯವಸ್ಥೆಗಳಿರುವುದಿಲ್ಲ.
ಈ ರಸ್ತೆ ಉದ್ದ 11 ಕಿ.ಮೀಗಳಿದ್ದು, ಅದರಲ್ಲಿ ಸುಳ್ಯ ತಾಲೂಕಿನ 4 ಕಿ.ಮೀ. ಮತ್ತು ಪುತ್ತೂರು ತಾಲೂಕಿನ 4 ಕಿ.ಮೀ. ಡಾಮರು ಮೇಲ್ವೆಯನ್ನು ಹೊಂದಿರುತ್ತದೆ. ಉಳಿಕೆ 3 ಕಿ.ಮೀ ರಸ್ತೆಯು ಅರಣ್ಯ ವ್ಯಾಪ್ತಿಯಲ್ಲಿ ಬರುವುದಾಗಿದೆ. ಅದರ ಪೈಕಿ ಸುಳ್ಯ ತಾಲೂಕಿನ ಸುಳ್ಯ ತಾಲೂಕು ವ್ಯಾಪ್ತಿಯ 4 ಕಿ.ಮೀ ನಲ್ಲಿ 1 ಕಿ.ಮೀ ಸುಮಾರು 22 ವರ್ಷಗಳ ಹಿಂದೆ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಡಾಮರೀಕರಣಗೊಂಡಿರುತ್ತದೆ. ಉಳಿಕೆ 3 ಕಿ.ಮೀ ವ್ಯಾಪ್ತಿಯ ರಸ್ತೆಯನ್ನು ಡಾಮರೀಕರಣಗೊಳಿಸಬೇಕಾಗಿ ಸ್ಥಳೀಯರು ಹಲವು ಬಾರಿ ಸಂಬಂಧಿತ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಬೇಡಿಕೆ ಸಲ್ಲಿಸಿದ್ದು. ಯಾವುದೇ ರೀತಿಯ ಸ್ಪಂದನೆ ದೊರೆತಿರುವುದಿಲ್ಲ. ಈ ರಸ್ತೆಯು ಸುಳ್ಯ ತಾಲೂಕಿನ ಪರ್ಲಿಕಜೆ, ನಿಡುಬೆ, ಜಬಳೆ, ಕುದುಂಗು, ಕೊಚ್ಚಿ ಪ್ರದೇಶಗಳಿಗೆ. ಮತ್ತು ಪುತ್ತೂರು ತಾಲೂಕಿನ ದುಗ್ಗಳ, ಕಲ್ಲರ್ಪೆ, ಮಾವಿನಕಟ್ಟೆ ಪ್ರದೇಶಗಳಿಗೂ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆ ಸುಳ್ಯ ತಾಲೂಕಿನಿಂದ ಪುತ್ತೂರು ತಾಲೂಕಿನ ಸಂರ್ಪ ಕಲ್ಪಿಸುವ ರಸ್ತೆಯಾಗಿದ್ದು. ಈ ಭಾಗದ ರಬ್ಬರ್ ನಿಗಮದ ಸಿ.ಆರ್.ಸಿ. ಕಾಲನಿಯ ನಿವಾಸಿಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹಾಗೂ ಹಿಂದುಳಿದ ವರ್ಗಗಳ ಸುಮಾರು 600 ಮನೆಗಳನ್ನು ಒಳಗೊಂಡ ಈ ಪ್ರದೇಶದ ಸುಮಾರು 3,000 ಕ್ಕೂ ಹೆಚ್ಚು ನಿವಾಸಿಗಳಿಗೆ ತಮ್ಮ ಮೂಲಭೂತ ಸೌಲಭ್ಯಗಳನ್ನು ಪಡೆದುಕೊಳ್ಳುವರೇ ಅತೀ ಅಗತ್ಯವಾದ ಸಂಪರ್ಕ ರಸ್ತೆಯಾಗಿರುತ್ತದೆ. ಈ ರಸ್ತೆಯನ್ನು ಅಭಿವೃದ್ಧಿ ಪಡಿಸುವುದರಿಂದ ಈ ಪ್ರದೇಶದ ಎಲ್ಲಾ ನಿವಾಸಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.
ಆದುದರಿಂದ ಮೇಲೆ ತಿಳಿಸಿರುವ ನಮ್ಮ ಗ್ರಾಮದ ಅತೀ ಮುಖ್ಯವಾಗಿ ದುಗ್ಗಳ- ಕಲ್ಲರ್ಪೆ- ಕೊಚ್ಚಿ- ಕುದುಂಗು ಸಂಪರ್ಕ ರಸ್ತೆಯ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆಗೊಳಿಸ ಅತೀ ಶೀಘ್ರ ಡಾಮರೀಕರಣ ಅಥವಾ ಕಾಂಕ್ರೀಟಿಕರಣಗೊಳಿಸಿ ಈ ಪ್ರದೇಶದ ನಿವಾಸಿಗಳ ಬಹು ಕಾಲಗಳ ಬೇಡಿಕೆಯನ್ನು ಪೂರೈಸಿಕೊಡಬೇಕಾಗಿ ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಸ್.ಎನ್.ಮನ್ಮಥ,ಸಾತ್ವಿಕ್ ಕುದುಂಗು,
ಶರತ್ ಜಬಳೆ,ಮಹೇಶ್ ಜಬಳೆ,ಸಚಿನ್ ಕೊಚ್ಚಿ, ನಿತಿನ್ ಕೊಚ್ಚಿ, ಸಚಿನ್ ಬಿ, ಕೊಚ್ಚಿ, ಸತೀಶ್ ಪಾಂಬಾರ್, ತೀರ್ಥಾನಂದ ದುಗ್ಗಲ,ಯತೀಂದ್ರ ಕೊಚ್ಚಿ, ಮಂಜುನಾಥ ದುಗ್ಗಲ, ಕೇಶವ ಪಾಂಬಾರ್, ಹರಿ ಪ್ರಸಾದ್ ದುಗ್ಗಲ, ದಿವಾಕರ್ ರೈ ಕೆರೆಮೂಲೆ, ಬಾಸ್ಕರ ರೈ,ಹರಿಪ್ರಸಾದ್ ಅಂತಿಕಡಲ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.