ಗಾಂಧಿನಗರ: ಮಾಸಿಕ ಮಹಲರತುಲ್ ಬದ್ರಿಯಾ ಮಜ್ಲಿಸ್ ಹಾಗೂ ಮಾದಕ ಲಹರಿ ಬಗ್ಗೆ ಜಾಗೃತಿ ಕಾರ್ಯಕ್ರಮ

0

ಸುನ್ನಿ ಸ್ಟೂಡೆಂಟ್ ಫೆಡರೇಶನ್ (ಎಸ್ ಎಸ್ ಎಫ್), ಸುನ್ನಿ ಯುವಜನ ಸಂಘ (ಎಸ್ ವೈ ಎಸ್) ಕರ್ನಾಟಕ ಮುಸ್ಲಿಂ ಜಮಾಅತ್ ಗಾಂಧಿನಗರ ಶಾಖೆ ವತಿಯಿಂದ ಮಾಸಿಕ ಮಹಲರತುಲ್ ಬದ್ರಿಯಾ ಮಜ್ಲೀಸ್ ಹಾಗೂ ಮಾದಕ ಲಹರಿಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಗಸ್ಟ್ 7 ರಂದು ಸುಳ್ಯ ಸುನ್ನೀ ಸೆಂಟರ್ ನಲ್ಲಿ ನಡೆಯಿತು.

ಕಾರ್ಯಕ್ರಮದ ನೇತೃತ್ವವವನ್ನು ಸಯ್ಯದ್ ತ್ವಾಹಿರ್ ತಂಙಳ್ ಸಅದಿ ಸುಳ್ಯ ವಹಿಸಿದ್ದರು.ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಜಯನಗರ ದುವಾ ನೆರವೇರಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಸಮಾಜಕ್ಕೆ ಬಹುದೊಡ್ಡ ಪಿಡುಗಾಗಿ ಮಾರ್ಪಟ್ಟಿರುವ ಮಾದಕ ವ್ಯಸನಗಳ ಬಗ್ಗೆ ಎಸ್.ವೈ.ಎಸ್ ಸರ್ಕಲ್ ಅಧ್ಯಕ್ಷ ಲತೀಪ್ ಸಖಾಫಿ ಗೂನಡ್ಕ ಜಾಗೃತಿ ಅರಿವನ್ನು ನೀಡಿ ಮಾದಕ ದ್ರವ್ಯದ ವ್ಯಸನಿಗಳಾಗುವ ಈಗಿನ ಕಾಲದ ಕೆಲವು ಯುವ ಸಮುದಾಯ ತಮ್ಮ ಜೀವನವನ್ನು ನಾಶಪಡಿಸುತ್ತಿರುವ ಬಗ್ಗೆ ಮಾತನಾಡಿದರು.ನಮ್ಮ ಮಕ್ಕಳನ್ನು ಸರಿ ದಾರಿಗೆ ತರುವ ಜವಾಬ್ದಾರಿ ಪೋಷಕರ ಮತ್ತು ಸಮಾಜದ ಮುಖಂಡರ ಮೇಲೆ ಅತಿ ಹೆಚ್ಚಾಗಿ ಅವಲಂಬಿತವಾಗಿರುವುದರಿಂದ ಇದರ ಬಗ್ಗೆ ಎಲ್ಲರೂ ಜಾಗರೂಕತರಾಗಿ ಕೆಟ್ಟದಾರಿಗೆ ಹೋಗದಂತೆ ತಡೆಯಬೇಕಾಗಿದೆ ಎಂದು ಮಾತನಾಡಿ ಜಾಗೃತಿ ಮೂಡಿಸಿದರು.

ಇರ್ಫಾನ್ ಸಅದಿ ಜೋಗಿಬೆಟ್ಟು ಮಹಲರತುಲ್ ಬದ್ರಿಯಾ ಬೈತ್ ಆಲಾಪಿಸಿದರು.
ಈ ಸಂದರ್ಭದಲ್ಲಿ ವಿದೇಶದಿಂದ ಆಗಮಿಸಿರುವ ಬಹರೈನ್ ಕೆ.ಸಿ.ಎಪ್ ಸದಸ್ಯರಾದ ಮೌದೀನ್ ಜಟ್ಟಿಪ್ಪಳ್ಳ ಹಾಗೂ ಸೌದಿ ಅರೇಬಿಯಾ ಕೆ.ಸಿ.ಎಫ್ ಸದಸ್ಯರಾದ ಮುಸ್ತಫಾ ಅರಂಬೂರು ರವರನ್ನು ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಕ್ಫ್ ಬೋರ್ಡ್ ದ.ಕ ಜಿಲ್ಲಾ ಸಮಿತಿ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಮೊಗರ್ಪಣೆ,ಎಸ್ ವೈ ಎಸ್ ರಾಜ್ಯ ಸಮಿತಿ ಸದಸ್ಯ ಸಿದ್ದೀಕ್ ಕಟ್ಟೆಕ್ಕಾರ್ಸ್, ಎಸ್.ವೈ.ಎಸ್ ಝೋನ್ ಸಾಂತ್ವನ ಕಾರ್ಯದರ್ಶಿ ಸಿದ್ದೀಕ್ ಗೂನಡ್ಕ,ಕೆ.ಎಮ್.ಜೆ ಗಾಂಧಿನಗರ ಅಧ್ಯಕ್ಷ ಅಬೂಬಕ್ಕರ್ ಜಟ್ಟಿಪ್ಪಳ್ಳ,ಎಸ್ ವೈ ಎಸ್ ಗಾಂಧಿನಗರ ಅಧ್ಯಕ್ಷ ನಿಝಾರ್ ಸಖಾಫಿ,ಎಸ್.ಎಸ್.ಎಫ್ ಗಾಂಧಿನಗರ ಅಧ್ಯಕ್ಷ ಆಬಿದ್ ಕಲ್ಲುಮುಟ್ಳು,ಅನ್ಸಾರ್ ಕಾರ್ಯದರ್ಶಿ ಹನೀಫ್ ಬಿ.ಎಮ್,ಕಬೀರ ಜಟ್ಟಿಪ್ಪಳ್ಳ,ಗಾಂಧಿನಗರ ಮದರಸದ ಅಧ್ಯಾಪಕರುಗಳು, ಜಂಟಿ ಸಂಘಟನೆಯ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.ಕೊನೆಯಲ್ಲಿ ತಬರ್ರುಕ್ ವಿತರಣೆ ಮಾಡಲಾಯಿತು.