ದೇವಚಳ್ಳ : ಗೊಂದಲದ ಗೂಡಾದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

0

ಬಿಜೆಪಿ ಬೆಂಬಲಿತ ಸದಸ್ಯರ ಗೈರು ! – ಅಧ್ಯಕ್ಷತೆಗೆ ಸಲ್ಲಿಸಿದ್ದ ನಾಮಪತ್ರ ಹಿಂತೆಗೆತ

ಕೊನೆಗೆ ಬಂದ ಬಿಜೆಪಿ‌ ಬೆಂಬಲಿತ ಸದಸ್ಯರು-ಉಪಾಧ್ಯಕ್ಷರ ಆಯ್ಕೆ ನಿರಾಳ

ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಗೊಂದಲದ ಗೂಡಾಗಿಯಿತು. ಬಿಜೆಪಿ ಬೆಂಬಿಲಿತ ಸದಸ್ಯರ ಗೈರು‌ ಹಾಜರಾದ ಘಟನೆಯೂ ನಡೆದಿದೆ.

ಇಂದು ಬೆಳಿಗ್ಗೆಯೇ ಬಿಜೆಪಿ ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿಯವರು ದೇವಚಳ್ಳ ಪಂಚಾಯತ್ ಗೆ ಆಗಮಿಸಿ‌, ಪಂಚಾಯತ್ ಸದಸ್ಯರೊಂದಿಗೆ ಮಾತು‌ಕತೆ ನಡೆಸಿದ್ದರು. ಅದರಂತೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರೇಮಲತಾ ಕೇರರವರಿಗೆ ಅಧ್ಯಕ್ಷತೆ‌ ಅಥವಾ ಉಪಾಧ್ಯಕ್ಷತೆ ನೀಡಬೇಕೆಂದು ಒತ್ತಾಯಿಸಿದ್ದರೆನ್ನಲಾಗಿದೆ. ಆದರೆ ಸ್ವಾಭಿಮಾನಿ ವೇದಿಕೆಯವರು ಒಪ್ಪಿಗೆ ಸೂಚಿಸಿರಲಿಲ್ಲವೆನ್ನಲಾಗಿದೆ. ಆದರೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಅಧ್ಯಕ್ಷತೆ ಮತ್ತು ಉಪಾಧ್ಯಕ್ಷತೆಗೆ ನಾಮ ಪತ್ರ ಸಲ್ಲಿಸಿರಲಿಲ್ಲ. ಆದರೆ ಅಧ್ಯಕ್ಷತೆಗೆ ಈ ಹಿಂದೆ ಇದ್ದ ಸ್ವಾಭಿಮಾನಿ ಬಳಗದಿಂದ ಸುಲೋಚನ ದೇವಾರವರು ಮತ್ತು ಉಪಾಧ್ಯಕ್ಷತೆಗೆ ಸ್ವಾಭಿಮಾನಿ ವೇದಿಕೆಯಿಂದ ಲೀಲಾವತಿ ಸೇವಾಜೆಯವರು ನಾಮ ಪತ್ರ ಸಲ್ಲಿಸಿದ್ದರು.

ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆ ಅಧ್ಯಕ್ಷ ಸ್ಥಾನ ಅಥವಾ ಉಪಾಧ್ಯಕ್ಷ ಸ್ಥಾನ ಕೊಡಲೇಬೇಕೆಂದು ಒತ್ತಾಯಿಸಿದ್ದ ಪರಿಣಾಮ ದೇವಚಳ್ಳ ಪಂಚಾಯತ್ ನಲ್ಲಿ ಒಂದಷ್ಟು ಮಾತುಕತೆಗಳು‌ ನಡೆಯುತ್ತಲೇ ಇತ್ತು. ಆದರೆ ಬಿಜೆಪಿ‌ ಬೆಂಬಲಿತ ಸದಸ್ಯರು ಹಾಜರಿರಲಿಲ್ಲ.

ಸ್ವಾಭಿಮಾನಿ ವೇದಿಕೆಯೊಳಗೆ ಮಾತುಕತೆ :

ನಾಮ ಪತ್ರ ಸಲ್ಲಿಸಿದ ಬಳಿಕ ಸ್ವಾಭಿಮಾನಿ‌ ಬಳಗದವರು ದೇವಚಳ್ಳ ಪಂಚಾಯತ್ ವಠಾರದ ಲ್ಲಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭ ಬಿಜೆಪಿ ‌ಬೆಂಬಿಲಿತ ಅಭ್ಯರ್ಥಿಗೆ ಅಧ್ಯಕ್ಷತೆ ಅಥವಾ ಉಪಾಧ್ಯಕ್ಷತೆ ಕೊಡಲೆಬೇಕೆಂದಿದ್ದರೆ‌ ನಾವು ಸದಸ್ಯತನಕ್ಕೆ‌ ರಾಜೀನಾಮೆ ನೀಡುವ ಬಗ್ಗೆಯೂ ಸ್ವಾಭಿಮಾನಿ‌ ಬಳಗದವರು ನಿರ್ಧಾರಕ್ಕೆ ಬಂದರೆನ್ನಲಾಗಿದೆ. ಬಳಿಕ ಮಧ್ಯಾಹ್ನ ಒಂದು‌ ಗಂಟೆಯವರೆಗೂ ಮಾತುಕತೆ ನಡೆಯುತ್ತಿತ್ತು. ಅಂತಿಮವಾಗಿ ಸ್ವಾಭಿಮಾನಿ‌ ಬಳಗದವರು ತಮ್ಮ ನಾಮಪತ್ರ ಹಿಂಪಡೆದರು. ಹೀಗಾಗಿ ಅಧ್ಯಕ್ಷರ ಆಯ್ಕೆ ‌ಮುಂದೂಡಲ್ಪಟ್ಟು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಉಪಸ್ಥಿತರಿದ್ದರು.

ಉಪಾಧ್ಯಕ್ಷರಾಗಿ ಸ್ವಾಭಿಮಾನಿ ವೇದಿಕೆಯ ಲೀಲಾವತಿ ಸೇವಾಜೆಯವರು ಅವಿರೋಧವಾಗಿ ಆಯ್ಕೆಯಾದರು.

ತೋಟಗಾರಿಕಾ ಇಲಾಖೆಯ ಸಹಾಯಕ‌ ತೋಟಗಾರಿಕಾ ಅಧಿಕಾರಿ ಅರಬಣ್ಣ ಪೂಜೇರಿ ಚುನಾವಣಾ ಅಧಿಕಾರಿಯಾಗಿದ್ದರು.