ಸುಳ್ಯ ಸೀನಿಯರ್ ಲೀಜನ್ ವತಿಯಿಂದ ಎಂ.ಬಿ.ದೇವಕಿಯವರಿಗೆ ಶ್ರದ್ಧಾಂಜಲಿ ಸಭೆ

0

ಇಂದು ನಿಧನರಾದ ಸುಳ್ಯ ಮಹಿಳಾ ಸಮಾಜದ ಮಾಜಿ ಅಧ್ಯಕ್ಷೆ ಹಾಗೂ ಎಂ.ಬಿ.ಫೌಂಡೇಶನ್ ಅಧ್ಯಕ್ಷ ಎಂ.ಬಿ.ಸದಾಶಿವರ ತಾಯಿ ಶ್ರೀಮತಿ ಎಂ.ಬಿ.ದೇವಕಿಯವರು ಇಂದು ಮಧ್ಯಾಹ್ನ ನಿಧನರಾಗಿದ್ದು, ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ಸುಳ್ಯ ಸೀನಿಯರ್ ಲೀಜನ್ ವತಿಯಿಂದ ಸಂಜೆ ಕಾನತ್ತಿಲ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ಸೀನಿಯರ್ ಲೀಜನ್ ಅಧ್ಯಕ್ಷ ಪಿ.ಎಸ್.ಗಂಗಾಧರ್ ಮತ್ತು ದಿನೇಶ್ ಮಡಪ್ಪಾಡಿಯವರು ದೇವಕಿಯವರ ಗುಣಗಾನಗೈದರು. ಜಯಪ್ರಕಾಶ್ ಕಲ್ಲುಗದ್ದೆ, ದೇವರಾಜ್ ಕುದ್ಪಾಜೆ, ದೇವಿಪ್ರಸಾದ್ ಕುದ್ಪಾಜೆ, ರಂಜಿತ್ ಕುಕ್ಕೆಟ್ಟಿ ಉಪಸ್ಥಿತರಿದ್ದರು.