ಬಳ್ಪ ಗ್ರಾ.ಪಂ. ಅಧ್ಯಕ್ಷರಾಗಿ ಹರ್ಷಿತ್ ಕಾರ್ಜ, ಉಪಾಧ್ಯಕ್ಷರಾಗಿ ಪಾರ್ವತಿ ಪಿ.ಡಿ. ಅವಿರೋಧ ಆಯ್ಕೆ

0

ಬಳ್ಪ ಗ್ರಾ.ಪಂ.‌ನ ಅಧ್ಯಕ್ಷರಾಗಿ ಹರ್ಷಿತ್ ಕಾರ್ಜ ಹಾಗೂ ಉಪಾಧ್ಯಕ್ಷರಾಗಿ ಪಾರ್ವತಿ ಪಿ.ಡಿ. ಇಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ನಡೆಯಿತು.


ಅಧ್ಯಕ್ಷತೆಗೆ ಹರ್ಷಿತ್ ರನ್ನು ಸದಸ್ಯ ರಾಜೀವ‌ ಕಣ್ಕಲ್ ಸೂಚಿಸಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ಪಾರ್ವತಿಯವರನ್ನು ಮಾಜಿ ಅಧ್ಯಕ್ಷ ಹಾಲಿ ಸದಸ್ಯೆ ಶ್ರೀಮತಿ ಕುಸುಮಾ ಎಸ್. ರೈ ಸೂಚಿಸಿದ್ದರು.


ಪಂಚಾಯತ್ ಅಧ್ಯಕ್ಷೆ ಶಶಿಕಲಾ ಸೂಂತಾರು, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಬಳ್ಪ ಕೇನ್ಯ ಗ್ರಾಮ ವಿಕಾಸ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಬೊಳ್ಮಲೆ, ಸುಬ್ರಹ್ಮಣ್ಯ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಿವಪ್ರಸಾದ್ ನಡುತೋಟ, ಬಳ್ಪ ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ಸುಬ್ರಹ್ಮಣ್ಯ ಕಣ್ಕಲ್, ಭಾಸ್ಕರ ಪಂಡಿ, ಮಾಜಿ ಉಪಾಧ್ಯಕ್ಷೆ ಶ್ರೀಮತಿ ತಾರಾ ರೈ ಬಿರ್ಕಿ, ಬೀದಿಗುಡ್ಡೆ ಬಿಜೆಪಿ ಬೂತ್ ಅಧ್ಯಕ್ಷ ಹೊನ್ನಪ್ಪ ಎಂರ್ಬಿಲ, ಅಭಿಲಾಷ್ ಕಟ್ಟ, ದೇವರಾಜ್ ಕೊಠಾರಿ, ಪಂಜ ಸಿ.ಎ. ಬ್ಯಾಂಕ್ ನಿರ್ದೇಶಕರಾದ ಕಿಟ್ಟಣ್ಣ ಪೂಜಾರಿ, ಪಂಚಾಯತ್ ಸದಸ್ಯರಾದ ಚಂದ್ರಶೇಖರ ಅಕ್ಕೇಣಿ, ಪ್ರಶಾಂತ್ ಪೊಟ್ಟುಕೆರೆ, ದಿವಾಕರ ಎಣ್ಣೆಮಜಲು, ನೇತ್ರಾವತಿ ಹೊಪ್ಪಾಳೆ ಶೈಲಜಾ ಎಣ್ಣೆಮಜಲು, ಸುನೀತಾ ಸಂಪ್ಯಾಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನೆಲ್ಯಾಡಿಯ ಮಧು ಎ.ಜೆ. ಚುನಾವಣಾ ಅಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಪಂಚಾಯತ್ ಕಾರ್ಯದರ್ಶಿ ರಘು ಮತ್ತು ಸಿಬ್ಬಂದಿಗಳು ಸಹಕಾರ ನೀಡಿದರು.