ದುಗ್ಗಲಡ್ಕದ ದುಗ್ಗಲಾಯ ದೈವಸ್ಥಾನದ ನಾಗನಕಟ್ಟೆಯಲ್ಲಿ ನಾಗರ ಪಂಚಮಿ

0

ದುಗ್ಗಲಡ್ಕದ ಶ್ರೀ ದುಗ್ಗಲಾಯ ದೈವಸ್ಥಾನದ ಬಳಿ ಇರುವ ನಾಗನಕಟ್ಟೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆ ಇಂದು ಜರುಗಿತು. ಆ ಪ್ರಯುಕ್ತ ತಂಬಿಲ ಸೇವೆ,ನಾಗ ದೇವರಿಗೆ ಹಾಲು, ಸೀಯಾಳ, ತುಪ್ಪ, ಜೇನು ಮೊದಲಾದ ಅಭಿಷೇಕಗಳು ನಡೆಯಿತು.

ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸುಂದರ ರಾವ್ ಕೊಡೆಂಚಡ್ಕ, ಗೌರವಾಧ್ಯಕ್ಷ ದಯಾನಂದ ಸಾಲಿಯಾನ್ ಮೂಡೆಕಲ್ಲು, ಕಾರ್ಯದರ್ಶಿ ಕಜೆ ಕುಶಾಲಪ್ಪ ಗೌಡ ಮತ್ತು ಸದಸ್ಯರು, ಊರ ಭಕ್ತಾದಿಗಳು ಉಪಸ್ಥಿತರಿದ್ದರು.