ದೇವರಕಾನ ಶಾಲೆಯಲ್ಲಿ ಸುದ್ದಿ ಸಮೂಹ ಸಂಸ್ಥೆ ವತಿಯಿಂದ ನಡೆದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ

0

ಸುದ್ದಿ ಸಮೂಹ ಸಂಸ್ಥೆ ,ಷರಾ ಪ್ರಕಾಶನ ಸುಳ್ಯ ಸಹಯೋಗದಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ಪ್ರಬಂದ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವು ದೇವರಕಾನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆ.22 ರಂದು ನಡೆಯಿತು.
ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಧರ್ಮಪಾಲ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿಜೇತ ಮಕ್ಕಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಣೆ ಮಾಡಿದರು.
ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಶಾಲಾ ಎಸ್.ಡಿ.ಎಂ.ಸಿ.ಮಾಜಿ ಅಧ್ಯಕ್ಷ ನವೀನ್ ಕುಮಾರ್ ಸಾರಕರೆ, ಅಂಗನವಾಡಿ ಶಿಕ್ಷಕಿ ನಂದಿನಿ, ಸುದ್ದಿ ಪತ್ರಿಕೆಯ ವರದಿಗಾರರಾದ ಗಣೇಶ್ ಕುಕ್ಕುದಡಿ,ಕುಶಾಂತ್ ಕೊರತ್ಯಡ್ಕ ಉಪಸ್ಥಿತರಿದ್ದರು.


ಶಾಲಾ ಮುಖ್ಯ ಶಿಕ್ಷಕಿ ಪ್ರಮೀಳಾರವರು ಸ್ವಾಗತಿಸಿದರು, ಶಿಕ್ಷಕಿ ದೀಪ್ತಿ ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕಿ ಆಶಾಲತಾ ಮತ್ತು ಶಿಕ್ಷಕ ಗೋವಿಂದರಾವ್ ಸಹಕರಿಸಿದರು.
ಎಸ್.ಡಿ.ಎಂ.ಸಿ.ಅಧ್ಯಕ್ಷ ಧರ್ಮಪಾಲರವರು ಸುದ್ದಿ ಮತದಾರ ಜಾಗೃತಿ ಲಂಚ,ಭ್ರಷ್ಟಾಚಾರ ವಿರೋಧಿ ಆಂದೋಲನದ ಫಲಕ ಅನಾವರಣಗೊಳಿಸಿದರು.