ಚಂದ್ರಯಾನ 3 ಯಶಸ್ವಿಗಾಗಿ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಜೈಕಾರ

0

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಇಂದು ಚಂದ್ರನ ದಕ್ಷಿಣ ಧ್ರುವಪ್ರದೇಶದಲ್ಲಿ ಇಳಿಯಲಿರುವ ಚಂದ್ರಯಾನ 3ಕ್ಕೆ ಶಿಕ್ಷಕರು ವಿದ್ಯಾರ್ಥಿಗಳು ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಯಶಸ್ವಿಯಾಗಲೆಂದು ಜೈಕಾರ ಹಾಕಿದರು. ಈ ಸಂದರ್ಭದಲ್ಲಿ ಮಾತಾಡಿದ ದಾಮ್ಲೆಯವರು ಭಾರತದ ಬಾಹ್ಯಾಕಾಶ ಸಾಧನೆಯನ್ನು ವಿವರಿಸಿದರಲ್ಲದೆ ಚಂದ್ರಯಾನ 1, 2 ಮತ್ತು 3 ರ ಕುರಿತಾಗಿ ಮಾಹಿತಿ ನೀಡಿದರು. ಇಂದು ಸಂಜೆ ಮಕ್ಕಳು ಮನೆಗಳಲ್ಲಿ ಚಂದ್ರಯಾನದ ವಿಕ್ರಂ ಲೇಂಡರ್ ಚಂದ್ರನ ನೆಲದಲ್ಲಿ ಇಳಿದು ಪ್ರಜ್ಞಾನ ರೋವರ್ ಬಾಗಿಲನ್ನು ತೆರೆದು ಸ್ವಯಂಚಾಲಿತವಾಗಿ ಕಾರ್ಯಾರಂಭ ಮಾಡಲಿರುವ ಘಟನೆಯ ನೇರಪ್ರಸಾರವನ್ನು ನೋಡಲು ತಿಳಿಸಲಾಯಿತು.