ಸುಬ್ರಹ್ಮಣ್ಯದಲ್ಲಿ ಸುಳ್ಯ ತಾಲೂಕು ಮಟ್ಟದ ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಖೋಖೋ ಪಂದ್ಯಾಟ

0

ಐವರ್ನಾಡು, ಎಣ್ಮೂರು, ಸುಬ್ರಹ್ಮಣ್ಯ ಶಾಲೆಗಳಿಗೆ ಬಹುಮಾನ

ಶಾಲಾ ಶಿಕ್ಷಣ ಇಲಾಖೆ, ದ.ಕ ಜಿಲ್ಲಾಪಂಚಾಯತ್ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ ಹಾಗೂ ಶ್ರೀ ಸುಬ್ರಹ್ಮಣ್ಯೆಶ್ವರ ಪದವಿ ಪೂರ್ವ ಕಾಲೇಜು, ಸುಬ್ರಹ್ಮಣ್ಯ ಮತ್ತು ದ.ಕ.ಜಿ.ಪ.ಮಾ.ಹಿ.ಪ್ರಾ.ಶಾಲೆ ಸುಬ್ರಹ್ಮಣ್ಯ ಇವುಗಳ ಸಹಯೋಗದೊಂದಿಗೆ ಆ.22 ರಂದು ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲಾವಿಭಾಗದ ಬಾಲಕರ ಮತ್ತು ಬಾಲಕಿಯರ ಖೋ ಖೋ ಪಂದ್ಯಾಟವು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಸುಜಾತ ಧನಂಜಯ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀವತ್ಸ ವಹಿಸಿದ್ದರು.

ವೇದಿಕೆಯಲ್ಲಿ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯದ ಶಿಕ್ಷಣ ಸಂಯೋಜಕಿಯಾದ ಶ್ರೀಮತಿ ಸಂದ್ಯಾ ರವರು, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ದಿನೇಶ್ ಶೀರಾಡಿ ಮತ್ತು ವಿಶ್ವನಾಥ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಜೇಶ್ ಎನ್.ಎಸ್, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಭಾರತಿ ದಿನೇಶ್, ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ರೀಮತಿ ರೇಖಾರಾಣಿ ಸೋಮಶೇಖರ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಗಣೇಶ್ ಮತ್ತು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಮಾಧವ ಮೂಕಮಲೆ ರವರು ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯಸ್ಥರಾದ ಕೆ. ಯಶವಂತ.ರೈ ಯವರು ಪ್ರಾಸ್ತಾವಿಕ ಭಾಷಣ ಮಾಡಿದರು.

ಗಣಿತ ಶಿಕ್ಷಕರಾದ ಕೃಷ್ಣ ಭಟ್ ಸ್ವಾಗತಿಸಿ, ಪ್ರಾಥಮಿಕಶಾಲಾ ಶಿಕ್ಷಕಿ ಶ್ರೀಮತಿ ವಿನೋದ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮವನ್ನು ಜೀವಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಶೃತಿಯವರು ನಿರೂಪಿಸಿದರು.

ಪಂದ್ಯಾಟದಲ್ಲಿ ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಐವರ್ನಾಡು ಪ್ರೌಢಶಾಲೆ ಪ್ರಥಮ ಸ್ಥಾನ ಪಡೆದು, ಎಣ್ಮೂರು ಪ್ರೌಢಶಾಲೆ ದ್ವಿತೀಯ ಸ್ಥಾನ ಪಡೆಯಿತು. ಬಾಲಕೀಯರ ವಿಭಾಗದಲ್ಲಿ ಎಣ್ಮೂರು ಪ್ರೌಢಶಾಲೆ ಪ್ರಥಮ ಸ್ಥಾನ ಪಡೆದು, ಐವರ್ನಾಡು ಪ್ರೌಢಶಾಲೆ ದ್ವಿತೀಯ ಸ್ಥಾನ ಪಡೆಯಿತು. ಪ್ರಾಥಮಿಕ ಶಾಲಾ ವಿಭಾಗದ ಬಾಲಕರ ವಿಭಾಗದಲ್ಲಿ ಐವರ್ನಾಡು ಹಿ.ಪ್ರಾ ಶಾಲೆ ಪ್ರಥಮ ಸ್ಥಾನ ಪಡೆದು, ಸುಬ್ರಹ್ಮಣ್ಯ ಮಾ.ಹಿ.ಪ್ರಾ ಶಾಲೆ ದ್ವಿತೀಯ ಸ್ಥಾನ ಪಡೆಯಿತು. ಬಾಲಕೀಯರ ವಿಭಾಗದಲ್ಲಿ ಐವರ್ನಾಡು ಹಿ.ಪ್ರಾ ಶಾಲೆ ಪ್ರಥಮ ಸ್ಥಾನ ಪಡೆದು, ಸುಬ್ರಹ್ಮಣ್ಯ ಮಾ.ಹಿ.ಪ್ರಾ ಶಾಲೆ ದ್ವಿತೀಯ ಸ್ಥಾನ ಪಡೆಯಿತು.