ಸುಬ್ರಹ್ಮಣ್ಯ ಮಾದರಿ ಹಿ.ಪ್ರಾ ಶಾಲೆಯಲ್ಲಿ ಸುದ್ದಿ ಸಮೂಹ ಸಂಸ್ಥೆ ಮತ್ತು ಷರಾ ಪ್ರಕಾಶನದ ವತಿಯಿಂದ ನಡೆದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ

0

ಸುದ್ದಿ ಸಮೂಹ ಸಂಸ್ಥೆ, ಷರಾ ಪ್ರಕಾಶನ ಸುಳ್ಯ ಸಹಯೋಗದಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವು ಸುಬ್ರಹ್ಮಣ್ಯ ಮಾದರಿ ಹಿ.ಪ್ರಾ ಶಾಲೆಯಲ್ಲಿ ಆ.29 ರಂದು ನಡೆಯಿತು.


ಮುಖ್ಯೋಪಾಧ್ಯಾಯ ಮಾದವ ಮೂಕಮಲೆ ಬಹುಮಾನ ವಿತರಿಸಿದರು. ಶಿಕ್ಷಕಿ ವೀಣಾ ಉಪಸ್ಥಿತರಿದ್ದರು.
ಸುದ್ದಿ ಪತ್ರಿಕೆಯ ಕಛೇರಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ, ವರದಿಗಾರ ದಯಾನಂದ ಕೊರತ್ತೋಡಿ ಉಪಸ್ಥಿತರಿದ್ದರು. ವರದಿಗಾರ ಶಿವರಾಮ ಕಜೆಮೂಲೆ ಪ್ರಸ್ತಾವಿಕವಾಗಿ ಮಾತನಾಡಿದರು.