ಕರಿಕ್ಕಳ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಯಮುನಾ ಎಚ್ .ನಿವೃತ್ತಿ

0

ಕರಿಕ್ಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಯಮುನಾ ಎಚ್ ರವರು ಆ.31ರಂದು ನಿವೃತ್ತರಾಗಿದ್ದಾರೆ.
ಅವರು ಬೆಳ್ತಂಗಡಿ ತಾಲೂಕು ತುರ್ಕಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆಗೆ ಸೇರಿ, ಪಾಂಡಿಗದ್ದೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಲ್ಮಡ್ಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ
ಕರಿಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ.ಆವರು ಒಟ್ಟು 28 ವರುಷ 11 ತಿಂಗಳು ಸೇವೆ ಸಲ್ಲಿಸಿದ್ದಾರೆ.

ಅವರು ಕಲ್ಮಡ್ಕ ಗ್ರಾಮದ ಹಾಲುಗದ್ದೆ ಬೆಳ್ಯಪ್ಪ ಗೌಡ ಮತ್ತು ಶ್ರೀಮತಿ ಕಮಲಾ ದಂಪತಿಗಳ ಪುತ್ರಿ
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಕಲ್ಮಡ್ಕ ಗ್ರಾಮದ ಹಾಲುಗದ್ದೆ
ಕೃಷ್ಣಪ್ಪ ಗೌಡ ಕುದ್ವ ಬಿಡಾರಕಟ್ಟೆ
ರವರ ಪತ್ನಿ.ಪುತ್ರಿ ಶ್ರೀಮತಿ ಪ್ರೀಯಾ ಬಿ ಕೆ ಚಂದ್ರಹಾಸ ಹಾಸ್ಪರೆ ರವರು ಎಂ. ಎಸ್.ಡಬ್ಲು ಪದವೀಧರೆ ಪ್ರಸ್ತುತ 24/7ಅಮೆರಿಕಾ ಮೂಲದ ಕಂಪೆನಿಯಲ್ಲಿ ಯಚ್.ಆರ್ ಆಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಡಾ.ಪ್ರೀತಾ ಮಹೇಶ್ ಸವನಾಲು ರವರು ಎಂ.ಎಸ್.ಸಿ. ಪಿ.ಹೆಚ್.ಡಿ ಅಮೇರಿಕಾ ಮೂಲದ ಜನರಲ್ ಆಫ್ ವಿಜುವಲೈಸಡ್ ಎಕ್ಸ್ ಪರಿಮೆಂಟ್ಸ್ ಸೈಂಟಿಫಿಕ್ ರೈಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ದೀಪ್ತಿ ನಿತಿನ್ ಕೂಜುಗೋಡು ರವರು
ಎಮ್ ಕಂ ,ಕೆ.ಪಿ.ಎಂ.ಜಿ ಅಮೆರಿಕ ಮೂಲದ ಕಂಪೆನಿಯಲ್ಲಿ ಐ.ಟಿ ಆಡಿಟರ್ ಅಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.