ಸುಳ್ಯ ಕೆ.ವಿ.ಜಿ. ಮೆಡಿಕಲ್‌ ಕಾಲೇಜು : ಮತ್ತು ಎಂಡೋಸ್ಕೋಪಿ ಕಮಿಟಿ KSOGAದ ಸಹಯೋಗದಲ್ಲಿ ಒಂದು ದಿನದ ಲ್ಯಾಪ್ರೊಸ್ಕೋಪಿಕ್‌ ಕೌಶಲ್ಯ ತರಬೇತಿ ಕಾರ್ಯಾಗಾರ

0

ಕೆ.ವಿ.ಜಿ. ಮೆಡಿಕಲ್‌ಕಾಲೇಜು, ಸುಳ್ಯ ಮತ್ತುಎಂಡೋಸ್ಕೋಪಿ ಕಮಿಟಿ ಕಸೋಗ (ಏSಔಉಂ) ದ ಸಹಯೋಗದಲ್ಲಿಒಂದು ದಿನದ ಲ್ಯಾಪ್ರೊಸ್ಕೋಪಿಕ್‌ ಕೌಶಲ್ಯತರಭೇತಿ ಕಾರ್ಯಾಗಾರವು ಆ. 30 ರಂದು ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನುಡಾ. ಕೆ.ವಿ. ಚಿದಾನಂದ, ಅಧ್ಯಕ್ಷರುಎ.ಒ.ಎಲ್.ಇ ಸುಳ್ಯ ಇವರುವಹಿಸಿ, ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಶೀಘ್ರ ಬೆಳವಣಿಗೆ ಮತ್ತು ಮಹತ್ವದ ಬಗ್ಗೆ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಡೀನ್‌ಡಾ. ನೀಲಾಂಬಿಕೈ ನಟರಾಜನ್‌ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅತಿಥಿಗಳಾಗಿಎ.ಒ.ಎಲ್.ಇಉಪಾಧ್ಯಕ್ಷರಾದ ಶ್ರೀಮತಿ ಶೋಭಚಿದಾನಂದ, ವೈದ್ಯಕೀಯಅಧೀಕ್ಷಕರಾದಡಾ. ಗೋಪಿನಾಥ್‌ಪೈ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಐಙಆಒಸ್ಪರ್ಶ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಗದಗ್‌ನ ನಿರ್ದೇಶಕರಾದ ಡಾ. ಪ್ರಭಾದೇಸಾಯಿ, ಫಾದರ್ ಮುಲ್ಲರ್ ಮೆಡಿಕಲ್‌ ಕಾಲೇಜಿನ ಪ್ರೊಫೆಸರ್‌ಡಾ.ಪ್ರೇಮಡಿ.ಕುನ್ಹಾ ಹಾಗೂ ಕೆ.ವಿ.ಜಿ. ಮೆಡಿಕಲ್‌ಕಾಲೇಜಿನ ವೈದ್ಯರುಗಳಾದ ಡಾ.ಆನೀಷ್ ಶರ್ಮ, ಡಾ.ಭವ್ಯ, ಡಾ. ರಂಜಿತ್, ಡಾ.ಚಂದ್ರಶೇಖರಎಸ್, ಡಾ. ರವಿಕಾಂತ್‌ಜಿ.ಒ, ಡಾ. ರಂಗನಾಥ್, ಡಾ. ರೋಶನ್, ಡಾ.ಗೋಪಿನಾಥ ಪೈ ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು. ಮಧ್ಯಾಹ್ನ೨.೦೦ಘಂಟೆಯಿಂದ೫.೦೦ಘಂಟೆಯತನಕ ವಿವಿಧಲ್ಯಾಪ್ರೊಸ್ಕೋಪಿಕ್ ಉಪಕರಣಗಳ ಕೈ ತರಭೇತಿಯನ್ನು ನಡೆಸಿಕೊಡಲಾಯಿತು. ಈ ತರಭೇತಿಯ ಸದುಪಯೋಗ ಪಡೆಯಲು ಮಂಗಳೂರು, ಮಡಿಕೇರಿ ಹಾಗೂ ಚಾಮರಾಜ ನಗರ ವೈದ್ಯಕೀಯ ಮಹಾವಿದ್ಯಾಲಯಗಳ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿಸಂಘಟನಾಅಧ್ಯಕ್ಷರಾದಡಾ. ಗೀತಾಜೆದೊಪ್ಪ ಸ್ವಾಗತಿಸಿ, ಸಂಘಟನಾಕಾರ್ಯದರ್ಶಿ ಡಾ. ರವಿಕಾಂತ್‌ಜಿ.ಒ ವಂದಿಸಿದರು. ಡಾ.ವಿಶ್ವಾಸ್‌ಗೌಡ ಮತ್ತುಡಾ. ಶುಭಿಕಾರ್ಯಕ್ರಮ ನಿರೂಪಿಸಿದರು.ರಾಷ್ಟ್ರಗೀತೆಯೊಂದಿಗೆಕಾರ್ಯಕ್ರಮವು ಮುಕ್ತಾಯಗೊಂಡಿತು.