ಸಂಪಾಜೆ: ದ.ಕ. ಹಾಗೂ ಕೊಡಗು ಗಡಿಭಾಗದ ರಸ್ತೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆ

0

ದ.ಕ. ಸಂಪಾಜೆ ಹಾಗೂ ಕೊ.ಸಂಪಾಜೆ ಗ್ರಾ.ಪಂ. ಜಂಟಿಯಾಗಿ ಸ್ಥಳ ಪರಿಶೀಲನೆ

ದಕ್ಷಿಣ ಕನ್ನಡ ಹಾಗೂ ಕೊಡಗು ಗಡಿ ಭಾಗದಲ್ಲಿ ಕುಡಿಯುವ ನೀರು ಹಾಗೂ ರಸ್ತೆ ಸಮಸ್ಯೆ ಬಗ್ಗೆ ದ.ಕ. ಸಂಪಾಜೆ ಹಾಗೂ ಕೊಡಗು ಸಂಪಾಜೆ ಗ್ರಾಮ ಪಂಚಾಯತಿ ವತಿಯಿಂದ ಜಂಟಿಯಾಗಿ ಸ್ಥಳ ಪರಿಶೀಲನೆ ಕಾರ್ಯ ಸೆ.1ರಂದು ನಡೆಯಿತು.

ಸಂಪಾಜೆಯ ಹಾಸ್ಟೆಲ್ ಪಕ್ಕದ ರಸ್ತೆ ಹಾಗೂ ಆ ಭಾಗದ ಕುಡಿಯುವ ನೀರಿನ ಸಮಸ್ಯೆ ಕುರಿತು ಪರಿಶೀಲನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ದ.ಕ. ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಮತಿ ಶಕ್ತಿವೇಲು, ಉಪಾಧ್ಯಕ್ಷ ಎಸ್. ಕೆ. ಹನೀಫ್ ಕಲ್ಲುಗುಂಡಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ, ಕೊಡಗು ಸಂಪಾಜೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ರಮಾದೇವಿ ಬಾಲಚಂದ್ರ ಕಳಗಿ, ಕೊ.ಸಂಪಾಜೆ ಪಂಚಾಯತ್ ಅಭಿವೃದ್ಧಿ ಅದಿಕಾರಿ ಶ್ರೀಮತಿ ಶೋಭರಾಣಿ, ಉಪಾಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಅರೆಕಲ್ಲು ಉಪಸ್ಥಿತರಿದ್ದರು.

ದ.ಕ. ಸಂಪಾಜೆ ಹಾಗೂ ಕೊಡಗು ಸಂಪಾಜೆ ಗ್ರಾಮ ಪಂಚಾಯತಿಯವರು ಸೇರಿಕೊಂಡು ರಸ್ತೆ ಕುಸಿತ ಆದ ಸ್ಥಳ ದುರಸ್ತಿಪಡಿಸಲು ಪರಸ್ಪರ ಒಪ್ಪಿಗೆ ಸೂಚಿಸಿ ಸ್ಥಳೀಯ ನಿವಾಸಿ ನವೀನ್ ರವರಿಗೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಕೊಡಗು ಪಂಚಾಯತ್ ಅಧ್ಯಕ್ಷರಲ್ಲಿ ವಿನಂತಿಸಿಕೊಂಡರು. ಈ ಬಗ್ಗೆ ಸಭೆಯಲ್ಲಿ ಮಂಡಿಸಿ ಸರಿ ಪಡಿಸಿಕೊಡುವ ಭರವಸೆಯನ್ನು ಅಧ್ಯಕ್ಷೆ ಶ್ರೀಮತಿ ರಮಾದೇವಿ ಕಳಗಿ ಅವರು ನೀಡಿರುವುದಾಗಿ ತಿಳಿದುಬಂದಿದೆ.