ಗುತ್ತಿಗಾರಿನ ಬ್ಲೆಸ್ಡ್ ಕುರಿಯಕೋಸ್ ಶಾಲೆಯಲ್ಲಿ ಸುದ್ದಿ ಸಮೂಹ ಸಂಸ್ಥೆ ಮತ್ತು ಷರಾ ಪ್ರಕಾಶನದ ವತಿಯಿಂದ ನಡೆಸಿದ ಸ್ಪರ್ಧೆಯ ಬಹುಮಾನ ವಿತರಣೆ

0

ಸುದ್ದಿ ಸಮೂಹ ಸಂಸ್ಥೆ, ಷರಾ ಪ್ರಕಾಶನ ಸುಳ್ಯ ಸಹಯೋಗದಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವು ಬ್ಲೆಸ್ಡ್ ಕುರಿಯಕೋಸ್ ವಿದ್ಯಾ ಸಂಸ್ಥೆ ಗುತ್ತಿಗಾರಿನಲ್ಲಿ ಆ.31 ರಂದು ನಡೆಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಟ್ರೀಸ ಜೋನ್ ಬಹುಮಾನ ವಿತರಿಸಿದರು. ಸಂಸ್ಥೆಯ ಶಿಕ್ಷಕಕರುಗಳಾದ ರಮೇಶ್, ಶ್ವೇತಾ ಕುಮಾರಿ, ಸೆಲಿನಾ ಉಪಸ್ಥಿತರಿದ್ದರು.
ಸುದ್ದಿ ಪತ್ರಿಕೆಯ ವರದಿಗಾರ ಶಿವರಾಮ ಕಜೆಮೂಲೆ, ಯತೀಶ್ ಕದ್ರ ಉಪಸ್ಥಿತರಿದ್ದರು.